ಸತ್ಯಾರ್ಥಿ ಮನೆಗೆ ಕನ್ನ: ನೊಬೆಲ್‌ ಪ್ರತಿಕೃತಿ ಕಳವು

Team Udayavani, Feb 8, 2017, 8:31 AM IST

ಹೊಸದಿಲ್ಲಿ: ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್‌ ಸತ್ಯಾರ್ಥಿ ಅವರ ನೊಬೆಲ್‌ ಪ್ರಶಸ್ತಿ ಪ್ರತಿಕೃತಿ ಕಳವಾಗಿದೆ.  ದಿಲ್ಲಿಯ ಕಲ್ಕಾಜಿ ಪ್ರದೇಶದಲ್ಲಿರುವ ಇವರ ಮನೆಯಲ್ಲಿ ಕಳ್ಳತನ ನಡೆದಿದೆ. ನೊಬೆಲ್‌ ಪ್ರಶಸ್ತಿ ಪ್ರತಿಕೃತಿ, ಚಿನ್ನಾಭರಣಗಳು ಸೇರಿ ಹಲವಾರು ಬೆಲೆ ಬಾಳುವ ವಸ್ತುಗಳು ಲೂಟಿಯಾಗಿವೆ. ಸದ್ಯ ಸತ್ಯಾರ್ಥಿ ಅಮೆರಿಕದಲ್ಲಿದ್ದಾರೆ. ಅವರ ಕಾರು ಚಾಲಕನಿಂದ ಈ ವಿಷಯ ಬಹಿರಂಗವಾಗಿದೆ. ಚಾಲಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ