ಕಾಳಿ ಮಾಂಸಾಹಾರಿ ಎಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
Team Udayavani, Jul 5, 2022, 10:29 PM IST
ಕೋಲ್ಕತ: ತಮಿಳುನಾಡು ಮೂಲದ ನಿರ್ದೇಶಕಿ ಲೀನಾ ಅವರು ಕಾಳಿ ಮಾತೆ ಕೈಗೆ ಸಿಗರೇಟ್ ಕೊಟ್ಟು ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಕಾಳಿ ಸಿನಿಮಾದ ಪೋಸ್ಟರ್ ವಿವಾದದ ಬಗ್ಗೆ ಅವರನ್ನು ಪ್ರಶ್ನಿಸಿದಾಗ, “ನನ್ನ ಪ್ರಕಾರ ಕಾಳಿ ಮಾಂಸಾ ಹಾರ ಮತ್ತು ಮದ್ಯ ಸ್ವೀಕರಿಸುವ ದೇವಿ. ಎಲ್ಲರಿಗೂ ಅವರದ್ದೇ ಕಲ್ಪನೆಯಲ್ಲಿ ದೇವರನ್ನು ನೋಡುವ ಹಕ್ಕಿದೆ. ಹಲವೆಡೆ ದೇವರಿಗೆ ಮದ್ಯವನ್ನು ನೈವೇದ್ಯ ಮಾಡುತ್ತಾರೆ’ ಎಂದಿದ್ದಾರೆ.
ಈ ಹೇಳಿಕೆಯ ಬಗ್ಗೆ ಅನೇಕರು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಟಿಎಂಸಿ, “ಇದು ಮಹುವಾ ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷಕ್ಕೂ ಈ ಹೇಳಿಕೆಗೂ ಸಂಬಂಧ ವಿಲ್ಲ. ನಾವೂ ಈ ಹೇಳಿಕೆಯನ್ನು ವಿರೋಧಿಸುತ್ತೇವೆ’ ಎಂದು ಸ್ಪಷ್ಟೀಕರಣ ಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು