ತಣ್ಣಗಾಗದ “ಕಾಳಿ ಮಾತೆ’ ಸಿನಿಮಾ ಪೋಸ್ಟರ್‌ ವಿವಾದ

Team Udayavani, Jul 7, 2022, 6:50 AM IST

ತಣ್ಣಗಾಗದ “ಕಾಳಿ ಮಾತೆ’ ಸಿನಿಮಾ ಪೋಸ್ಟರ್‌ ವಿವಾದ

ನವದೆಹಲಿ: ನಿರ್ದೇಶಕಿ ಲೀನಾ ಅವರ ಸಾಕ್ಷ್ಯಚಿತ್ರವೊಂದರ “ಕಾಳಿ ಮಾತೆ’ ಪೋಸ್ಟರ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆನಡಾದ ಅಗಾ ಖಾನ್‌ ವಸ್ತು ಸಂಗ್ರಹಾಲಯವು ಪೋಸ್ಟರ್‌ ಅನ್ನು ಹಿಂಪಡೆದಿದೆ. ಹಾಗೆಯೇ ಈ ವಿಚಾರವಾಗಿ ಕ್ಷಮೆಯಾಚಿಸಿದೆ. ಅದರ ಬೆನ್ನಲ್ಲೇ ಟ್ವಿಟರ್‌ ಸಂಸ್ಥೆ ಕೂಡ ವಿವಾದಾತ್ಮಕ ಪೋಸ್ಟರ್‌ಅನ್ನು ತನ್ನ ಜಾಲತಾಣದಿಂದ ತೆಗೆದುಹಾಕಿದೆ.

ಇದೇ ವಿಚಾರದಲ್ಲಿ “ಕಾಳಿ ಮಾಂಸಾಹಾರಿ, ಮದ್ಯ ಸೇವಿಸುವವಳು’ ಎಂದಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬುಧವಾರ ಮತ್ತೊಂದು ಎಫ್ಐಆರ್‌ ದಾಖಲಾಗಿದೆ. ಇದಕ್ಕೆ ಸಂಸದೆ ಮತ್ತೆ ಪ್ರತಿಕ್ರಿಯಿಸಿದ್ದು, “ನಾನು ಕಾಳಿಯ ಆರಾಧಕಿ. ತಾರಾಪಿತ್‌ನ ಕಾಳಿ ದೇಗುಲಕ್ಕೆ ತೆರಳಿ ಅಲ್ಲಿ ದೇವರಿಗೆ ಏನು ನೈವೇದ್ಯ ಮಾಡುತ್ತಾರೆ ಎನ್ನುವುದನ್ನು ನೋಡಿ ಬನ್ನಿ. ನಾನು ಯಾರಿಗೂ ಹೆದರುವುದಿಲ್ಲ. ಸತ್ಯಕ್ಕೆ ಬ್ಯಾಕಪ್‌ ಬಲದ ಅಗತ್ಯವಿಲ್ಲ’ ಎಂದಿದ್ದಾರೆ. ಹಾಗೆಯೇ ತಮ್ಮ ಹೇಳಿಕೆಯನ್ನು ಖಂಡಿಸಿದ ತಮ್ಮದೇ ಪಕ್ಷದ ಟ್ವಿಟರ್‌ ಖಾತೆಯನ್ನು ಅವರು ಅನ್‌ಫಾಲೋ ಮಾಡಿದ್ದಾರೆ. ಮಹುವಾ ಅವರನ್ನು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಬೆಂಬಲಿಸಿದ್ದಾರೆ.

ಸುಪ್ರೀಂ ನಕಾರ: ಪ್ರವಾದಿ ಬಗ್ಗೆ ಹೇಳಿಕೆ ಕೊಟ್ಟು ವಿವಾದಕ್ಕೀಡಾದ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಇದೇ ವೇಳೆ ನೂಪುರ್‌ ಅವರ ಶಿರಚ್ಛೇದ ಮಾಡುವವರಿಗೆ ಮನೆಯನ್ನೇ ಉಡು ಗೊರೆಯಾಗಿ ಕೊಡುವುದಾಗಿ ಹೇಳಿದ್ದ ಅಜ್ಮೀರ್ ದರ್ಗಾದ ಕ್ಲರ್ಕ್‌ ಅನ್ನು ಪೊಲೀಸರು ಬಂಧಿಸಿದ್ದಾರೆ.

ಸಹಿಸುವಂಥದ್ದಲ್ಲ ಎಂದ ಕೆನಡಾದ ಸಂಸದ
ಇತ್ತೀಚೆಗೆ ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಕನ್ನಡಿಗ ಸಂಸದ ಚಂದ್ರ ಆರ್ಯ ಕೂಡ ಕಾಳಿ ಪೋಸ್ಟರ್‌ ವಿಚಾರದಲ್ಲಿ ಬೇಸರ ಹೊರಹಾಕಿದ್ದಾರೆ.

“ಕಳೆದ ಕೆಲವು ವರ್ಷಗಳಿಂದ ಕೆನಡಾದಲ್ಲಿರುವ ಭಾರತ ವಿರೋಧಿ ಮತ್ತು ಹಿಂದೂ ವಿರೋಧಿಗಳು ಒಟ್ಟಾಗಿ ಹಿಂದೂ ವಿರೋಧಿ ಲೇಖನಗಳನ್ನು ಬರೆಯುತ್ತಿದ್ದಾರೆ. ಹಾಗೆಯೇ ಹಿಂದೂ ದೇವರುಗಳ ಮೇಲೆ ದಾಳಿ ಮಾಡಿದ್ದಾರೆ. ಇದು ಬಹಳ ಬೇಸರದ ಸಂಗತಿ. ಅಗಾ ಖಾನ್‌ ವಸ್ತು ಸಂಗ್ರಹಾಲಯ ಕ್ಷಮೆ ಕೇಳಿರುವುದು ಸ್ವಾಗತಾರ್ಹ’ ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

ಉಪ್ಪುಂದ: ಕಾಲುಸಂಕ ದಾಟುವಾಗ ವಿದ್ಯಾರ್ಥಿನಿ ನೀರುಪಾಲು; 48 ಗಂಟೆ ಬಳಿಕ ಮೃತ ದೇಹ ಪತ್ತೆ

ಉಪ್ಪುಂದ: ಕಾಲುಸಂಕ ದಾಟುವಾಗ ವಿದ್ಯಾರ್ಥಿನಿ ನೀರುಪಾಲು; 48 ಗಂಟೆ ಬಳಿಕ ಮೃತ ದೇಹ ಪತ್ತೆ

9talwar

ಸುಳ್ಯ: ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಹಿಡಿದು ಓಡಾಟ; ವಿಡಿಯೋ ವೈರಲ್

army

ಕಾಶ್ಮೀರಿ ಪಂಡಿತ ರಾಹುಲ್ ರನ್ನು ಹತ್ಯೆಗೈದಿದ್ದ ಮೋಸ್ಟ್ ವಾಂಟೆಡ್ ಉಗ್ರರಿಬ್ಬರ ಎನ್‌ಕೌಂಟರ್‌

siddanna-2

ವಿದ್ಯುಚ್ಛಕ್ತಿ ಕಾಯ್ದೆ-2022: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಕಾಂಗ್ರೆಸ್ ಮಾಡಿದ್ದ ಆಸ್ತಿಯನ್ನು ಖಾಸಗಿಯವರಿಗೆ ಕೊಟ್ಟಿದ್ದೇ ಬಿಜೆಪಿ ಸಾಧನೆ: ಮಧು ಬಂಗಾರಪ್ಪ

ಕಾಂಗ್ರೆಸ್ ಮಾಡಿದ್ದ ಆಸ್ತಿಯನ್ನು ಖಾಸಗಿಯವರಿಗೆ ಕೊಟ್ಟಿದ್ದೇ ಬಿಜೆಪಿ ಸಾಧನೆ: ಮಧು ಬಂಗಾರಪ್ಪ

HDK

ಬೂಟಾಟಿಕೆ ದಾಸಯ್ಯನಿಗೆ ಮೈಯೆಲ್ಲ ಪಂಗನಾಮ: ಅಶ್ವತ್ಥನಾರಾಯಣ ವಿರುದ್ದ ಹೆಚ್ ಡಿಕೆ

B K HARi

ಅಮಿತ್ ಶಾ ಬಿಜೆಪಿ ನಾಯಕರಿಗೆ ವಿಳ್ಯದೆಲೆ ಶಾಸ್ತ್ರ ಮಾಡಲು ಬಂದಿದ್ದರಾ?: ಬಿ.ಕೆ. ಹರಿಪ್ರಸಾದ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

army

ಕಾಶ್ಮೀರಿ ಪಂಡಿತ ರಾಹುಲ್ ರನ್ನು ಹತ್ಯೆಗೈದಿದ್ದ ಮೋಸ್ಟ್ ವಾಂಟೆಡ್ ಉಗ್ರರಿಬ್ಬರ ಎನ್‌ಕೌಂಟರ್‌

goa

ಗೋವಾದಲ್ಲಿ ಹೆಚ್ಚಿದ ಪ್ರವಾಸಿಗರು: ದರಗಳು ದುಪ್ಪಟ್ಟು

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ

ಭಾರತದಲ್ಲಿ 24ಗಂಟೆಯಲ್ಲಿ 16,047 ಕೋವಿಡ್ ಸೋಂಕು ಪ್ರಕರಣ ಪತ್ತೆ, 54 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 16,047 ಕೋವಿಡ್ ಸೋಂಕು ಪ್ರಕರಣ ಪತ್ತೆ, 54 ಮಂದಿ ಸಾವು

MUST WATCH

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

udayavani youtube

ಪ್ರವೀಣ್‌ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ

udayavani youtube

ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ : ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಅಶೋಕ್

udayavani youtube

ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ

udayavani youtube

3೦ವರ್ಷದಿಂದ ಕೃಷಿಯಲ್ಲಿ ಖುಷಿ ಮತ್ತು ಪ್ರೀತಿಯನ್ನು ಕಂಡಿದ್ದೇವೆ

ಹೊಸ ಸೇರ್ಪಡೆ

ಉಪ್ಪುಂದ: ಕಾಲುಸಂಕ ದಾಟುವಾಗ ವಿದ್ಯಾರ್ಥಿನಿ ನೀರುಪಾಲು; 48 ಗಂಟೆ ಬಳಿಕ ಮೃತ ದೇಹ ಪತ್ತೆ

ಉಪ್ಪುಂದ: ಕಾಲುಸಂಕ ದಾಟುವಾಗ ವಿದ್ಯಾರ್ಥಿನಿ ನೀರುಪಾಲು; 48 ಗಂಟೆ ಬಳಿಕ ಮೃತ ದೇಹ ಪತ್ತೆ

9talwar

ಸುಳ್ಯ: ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಹಿಡಿದು ಓಡಾಟ; ವಿಡಿಯೋ ವೈರಲ್

army

ಕಾಶ್ಮೀರಿ ಪಂಡಿತ ರಾಹುಲ್ ರನ್ನು ಹತ್ಯೆಗೈದಿದ್ದ ಮೋಸ್ಟ್ ವಾಂಟೆಡ್ ಉಗ್ರರಿಬ್ಬರ ಎನ್‌ಕೌಂಟರ್‌

8agriculture

ದೂರು ನೋಂದಾಯಿಸಲು ತಾಂತ್ರಿಕ ಅಡಚಣೆ

siddanna-2

ವಿದ್ಯುಚ್ಛಕ್ತಿ ಕಾಯ್ದೆ-2022: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.