ಇಂಡಿಯನ್-2 ಚಿತ್ರೀಕರಣ ವೇಳೆ ಕ್ರೇನ್ ಅವಘಡ: ಕಮಲ್ ಹಾಸನ್ ವಿಚಾರಣೆ
Team Udayavani, Mar 3, 2020, 9:00 PM IST
ಚೆನ್ನೈ: ಕಳೆದ ತಿಂಗಳು ಇಂಡಿಯನ್-2 ಚಿತ್ರೀಕರಣ ವೇಳೆ ಮೂವರನ್ನು ಬಲಿ ಪಡೆದ ಪ್ರಕರಣ ಸಂಬಂಧ ನಟ ಕಮಲ್ ಹಾಸನ್ ಅವರನ್ನು ವಿಚಾರಣೆ ನಡೆಸಲಾಯಿತು. ಕೇಂದ್ರೀಯ ಅಪರಾಧ ದಳದ ಪೊಲೀಸರ ಮುಂದೆ ಹಾಜರಾದ ಅವರನ್ನು ಮೂರು ಗಂಟೆಗಳ ಕಾಲ ಘಟನೆ ಕುರಿತು ಮಾಹಿತಿ ಪಡೆಯಲಾಗಿದೆ. ಫೆ.19ರಂದು ಇಂಡಿಯನ್-2 ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ರೇನ್ ಕೆಳಗೆ ಇಳಿಸುವಾಗ ಸಹಾಯಕ ನಿರ್ದೇಶಕ ಕೃಷ್ಣ, ಕಲೆ ಸಹಾಯಕ ಚಂದ್ರನ್ ಹಾಗೂ ಪ್ರೊಡಕ್ಷನ್ ಅಸಿಸ್ಟೆಂಟ್ ಮಧು ಸಾವನ್ನಪ್ಪಿದ್ದರು.