Udayavni Special

ಆಹ್ವಾನ ಬರದಿದ್ದರೆ ಸುಪ್ರೀಂಗೆ ಮನವಿ


Team Udayavani, May 17, 2018, 6:00 AM IST

b-12.jpg

ನವದೆಹಲಿ: ಕರ್ನಾಟಕದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲ ವಿ.ಆರ್‌.ವಾಲಾ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಆಹ್ವಾನ ನೀಡದೇ ಇದ್ದಲ್ಲಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಲು ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ. ಅದಕ್ಕಾಗಿಯೇ ಚಂಡೀಗಢ ಪ್ರವಾಸದಲ್ಲಿದ್ದ ರಾಜ್ಯಸಭಾ ಸದಸ್ಯ ಅಭಿಷೇಕ್‌ ಮನು
ಸಿಂಘ್ವಿಯವರನ್ನು ತುರ್ತಾಗಿ ನವದೆಹಲಿಗೆ ಕಾಂಗ್ರೆಸ್‌ ವರಿಷ್ಠ ಮಂಡಳಿ ಕರೆಸಿಕೊಂಡಿದೆ.

“ಈಗಾಗಲೇ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಲಾಗಿದೆ. ಸರ್ಕಾರ ರಚನೆಗೆ ಬೇಕಾದ ಸಂಖ್ಯಾ ಬಲದ ಜತೆಗೆ ಶೇ.56ರಷ್ಟು ಮತಗಳನ್ನು ಪಡೆದು ಕೊಂಡಿದ್ದೇವೆ. ಇನ್ನೂ ಆಹ್ವಾನ ನೀಡದಿದ್ದರೆ ಸುಪ್ರೀಂಗೆ ಮನವಿ ಸಲ್ಲಿಸುತ್ತೇವೆ’ ಎಂದು ಹೆಸರು ಬಹಿರಂಗಪಡಿ ಸಲಿಚ್ಛಿಸದ ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದಾರೆ.

ಸಿದ್ದರಾಮಯ್ಯಗೆ ಟೀಕೆ: ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಕುದುರೆ ವ್ಯಾಪಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಆರೋಪ ಮಾಡಿರುವುದಕ್ಕೆ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಆಕ್ಷೇಪ ಮಾಡಿದ್ದಾರೆ. “ಸಿದ್ದರಾಮಯ್ಯನವರ ಸಂಪುಟದಲ್ಲಿನ ಕೇವಲ 16 ಸಚಿವರು ಮಾತ್ರ ಸೋತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. “ನಮ್ಮ ಪ್ರಧಾನಮಂತ್ರಿ ವಿರುದಟಛಿ ಅವರು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಪ್ರಸಾದ್‌ ಹೇಳಿದ್ದಾರೆ. 

ನಿಷೇಧ ಹೇರಲು ಒಮರ್‌ ಸಲಹೆ: ಒಂದು ಪಕ್ಷದಿಂದ ಮತ್ತೂಂದು ಪಕ್ಷಕ್ಕೆ ನಿಷ್ಠೆ ಬದಲಿಸುವ ಶಾಸಕರನ್ನು ಒಂದು ಅವಧಿಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಒಮರ್‌ ಅಬ್ದುಲ್ಲಾ ಸಲಹೆ ನೀಡಿದ್ದಾರೆ. ಕರ್ನಾಟಕದಲ್ಲಿ ಚುನಾವಣೋತ್ತರ ಬೆಳವಣಿಗೆ ಬಗ್ಗೆ ಟ್ವೀಟ್‌ ಮಾಡಿದ ಅವರು, ಕೇವಲ ಅನರ್ಹಗೊಳಿಸುವುದರಿಂದ ಶಾಸಕರ ಖರೀದಿ ನಿಲ್ಲಿಸಲು ಸಾಧ್ಯವಿಲ್ಲ. ಅದಕ್ಕೆ ನಿಷ್ಠೆ ಬದಲಿಸುವ ಶಾಸಕರನ್ನು ಒಂದು
ಅವಧಿಗೆ ನಿಷೇಧ ಮಾಡುವುದೇ ಸೂಕ್ತ ಎಂದಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರ ರಚನೆಗಾಗಿ ಕೈಜೋಡಿಸಿರುವುದು ಸ್ವಾಗತವೇ. ಆದರೆ ರಾಜ್ಯಪಾಲರು ಅವರನ್ನು ಆಹ್ವಾನಿಸುವ ಬಗ್ಗೆ ಸಂಶಯಗಳಿವೆ.
● ಎಸ್‌.ಸುಧಾಕರ ರೆಡ್ಡಿ, ಸಿಪಿಐ ನಾಯಕ

ಬೊಮ್ಮಾಯಿ ಪ್ರಕರಣದಲ್ಲಿ ಸದನದಲ್ಲಿಯೇ ವಿಶ್ವಾಸಮತ ಯಾಚನೆಯಾಗಬೇಕೆಂದು ಸುಪ್ರೀಂಕೋರ್ಟ್‌ ಹೇಳಿದೆ. ಕರ್ನಾಟಕ ರಾಜ್ಯಪಾಲರು ಕೂಡಲೇ ವಿಧಾನಸಭೆ ಅಧಿವೇಶನ ಕರೆದು ಬಹುಮತ ಸಾಬೀತುಪಡಿಸಲು ಅವಕಾಶ ನೀಡಿ,  ಅಸಾಂವಿಧಾನಿಕವಾದ ಪದಟಛಿತಿಗಳಿಗೆ ಪೂರ್ಣ
ವಿರಾಮ ಹಾಕಬೇಕು.

● ನ್ಯಾ.ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತ

ಕರ್ನಾಟಕದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವನ್ನೇ ಆಹ್ವಾನಿಸಬೇಕು. ಏಕೆಂದರೆ ಅವರ ಬಳಿ ಸಂಖ್ಯಾ ಬಲ ಇದೆ.
● ಅರುಣ್‌ ಶ್ರೀವಾಸ್ತವ, ಜೆಡಿಯು ಬಂಡಾಯ ನಾಯಕ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಗೆ 13 ಮಂದಿ ಸಾವು, 508 ಹೊಸ ಪ್ರಕರಣ ಪತ್ತೆ

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಎರಡು ವಾರ ಪೂರೈಕೆ ವಲಯಕ್ಕೆ ಸತ್ವ ಪರೀಕ್ಷೆಯ ಕಾಲ

ಎರಡು ವಾರ ಪೂರೈಕೆ ವಲಯಕ್ಕೆ ಸತ್ವ ಪರೀಕ್ಷೆಯ ಕಾಲ

ಗಂಡನ ಬೈಕ್‌ ಸುತ್ತಾಟ: ಪತ್ನಿಯ ದೂರು

ಗಂಡನ ಬೈಕ್‌ ಸುತ್ತಾಟ: ಪತ್ನಿಯ ದೂರು

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?