ಇಎಸ್‌ಝೆಡ್ ಸುತ್ತ ಜನವಸತಿ, ಕೃಷಿ, ಕಚೇರಿಗಳ ನಿಷೇಧ
ಕೇರಳ ಅರಣ್ಯ ಇಲಾಖೆ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ
Team Udayavani, Jul 27, 2022, 6:30 AM IST
ತಿರುವನಂತಪುರ: ಕೇರಳದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳೆಂದು (ಇಎಸ್‌ಝೆಡ್) ಗುರುತಿಸಲಾಗಿರುವ ಪ್ರಾಂತ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯಲ್ಲಿ ಜನ ವಸತಿ, ಕೃಷಿ ಭೂಮಿಗಳು ಇರಬಾರದೆಂದು ನಿಷೇಧಿಸಿ ಕೇರಳ ಸರ್ಕಾರ ನಿರ್ಧರಿಸಿದೆ.
ಜೊತೆಗೆ, ಈ ವಲಯದಲ್ಲಿರುವ ಸರ್ಕಾರಿ ಕಚೇರಿಗಳು, ಅರೆ- ಸರ್ಕಾರಿ ಕಚೇರಿಗಳು ಹಾಗೂ ಇನ್ನಿತರ ಸಾರ್ವಜನಿಕ ಸಂಸ್ಥೆಗಳನ್ನು ಸ್ಥಳಾಂತರಗೊಳಿಸುವಂತೆ ನಿರ್ಧರಿಸಲಾಗಿದೆ.
ಕೇರಳ ಅರಣ್ಯ ಇಲಾಖೆ ಈ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಬುಧವಾರ, ಮುಖ್ಯಮಂತ್ರಿ ಪಿಣರಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಕೇಂದ್ರ ಸೆಡ್ಡು ಹೊಡೆಯಲು ಕ್ರಮ?
ಇತ್ತೀಚೆಗೆ, ಕೇಂದ್ರ ಸರ್ಕಾರ, ಕೇರಳದ 23 ವನ್ಯಜೀವಿ ಸಂರಕ್ಷಣಾ ತಾಣ ಹಾಗೂ ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ ಪ್ರಾಂತ್ಯಗಳಲ್ಲಿ ಜನವಸತಿಗೆ ಅವಕಾಶ ಕಲ್ಪಿಸಿ, ಕರಡು ನಿಯಮಗಳನ್ನು ಜಾರಿಗೊಳಿಸಿತ್ತು. ಆ ಹಿನ್ನೆಲೆಯಲ್ಲಿ, ಕೇಂದ್ರಕ್ಕೆ ಸೆಡ್ಡು ಹೊಡೆಯಲು ಕೇರಳ ಸರ್ಕಾರ, ಇಎಸ್‌ಝೆಡ್ ಸುತ್ತ ಜನ ವಸತಿ, ಕೃಷಿಯನ್ನು ನಿಷೇಧಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಜೊತೆಗೆ, ಅರಣ್ಯ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಲಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್ ಫಿಂಚ್
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ
ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು
ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್ ಹಾರನಹಳ್ಳಿ
ಸ್ಪಿನ್ ಎದುರಿಸುವುದೇ ಕಠಿನ ಸವಾಲು: ಉಸ್ಮಾನ್ ಖ್ವಾಜಾ