ಆರ್ ಎಸ್,ಎಸ್, ಬಿಜೆಪಿ ಮುಖಂಡರ ಹತ್ಯೆ; ಕೇರಳದ ಧೋರಣೆ ದೇಶಕ್ಕೆ ಅಪಾಯಕಾರಿ; ಏನಿದು ಆರೋಪ?
ಏಪ್ರಿಲ್ 29ರಂದು ಕೇರಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ
Team Udayavani, Apr 18, 2022, 11:55 AM IST
ನವದೆಹಲಿ: ಕೇರಳದಲ್ಲಿನ ಸನ್ನಿವೇಶ ದೇಶಕ್ಕೆ ಬಹಳ ಅಪಾಯಕಾರಿಯಾಗಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಕೇರಳದ ಬಿಜೆಪಿ ಘಟಕ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಪಾಲಕ್ಕಾಡ್ ನಲ್ಲಿ ಹತ್ಯೆಗೀಡಾಗಿದ್ದ ಆರ್ ಎಸ್ ಎಸ್ ಮುಖಂಡ ಶ್ರೀನಿವಾಸ್ ಅವರ ಅಂತ್ಯ ಸಂಸ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಕೇರಳದಲ್ಲಿನ ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಪಾಲಕ್ಕಾಡ್ ನ ಮೇಲಮುರಿಯಲ್ಲಿ ಆರ್ ಎಸ್ ಎಸ್ ಮುಖಂಡ ಶ್ರೀನಿವಾಸ್ ಅವರನ್ನು ಎಸ್ ಡಿಪಿಐ ಕಾರ್ಯಕರ್ತರು ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ. ಘಟನೆಯ ಹಿನ್ನೆಲೆಯಲ್ಲಿ ಏಪ್ರಿಲ್ 29ರಂದು ಕೇರಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ ಎಂದು ಸುರೇಂದ್ರನ್ ತಿಳಿಸಿದ್ದಾರೆ.
ರಾಜ್ಯದಲ್ಲಿನ ಇಸ್ಲಾಮ್ ಸಂಘಟನೆಗಳಿಗೆ ಕೇರಳ ರಾಜ್ಯಪಾಲರು ಬೆಂಬಲ ನೀಡುತ್ತಿರುವುದಾಗಿ ಸುರೇಂದ್ರನ್ ದೂರಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರ ಪೊಲೀಸರನ್ನು ತಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಪಾಲಕ್ಕಾಡ್ ನಲ್ಲಿ ಇತ್ತೀಚೆಗೆ ಆರ್ ಎಸ್ ಎಸ್, ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯಲಾಗಿದೆ. ಈ ಸಂಚು ರೂಪಿಸಿದವರ ವಿರುದ್ಧ ಕೇರಳ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದು ರಾಜ್ಯ ಸರ್ಕಾರದ ವೈಫಲ್ಯತೆಗೆ ಸಾಕ್ಷಿಯಾಗಿದೆ ಎಂದು ಸುರೇಂದ್ರನ್ ಹೇಳಿದರು.
ಶ್ರೀನಿವಾಸನ್ ಮೇಲಮುರಿಯಲ್ಲಿ ಎಸ್ ಕೆಎಸ್ ಆಟೋ ಸರ್ವೀಸ್ ಹೆಸರಿನ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಉದ್ಯಮ ನಡೆಸುತ್ತಿದ್ದರು. ಕಳೆದ ಶುಕ್ರವಾರ ಏಕಾಏಕಿ ಸ್ಕೂಟರ್ ನಲ್ಲಿ ಬಂದ ದುಷ್ಕರ್ಮಿಗಳು ಶ್ರೀನಿವಾಸನ್ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದು. ಕೂಡಲೇ ಶ್ರೀನಿವಾಸನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೊಬೈಲ್ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ:ಏನಿದು ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್
ಊಟದ ತಟ್ಟೆ ವಿಚಾರ: ಮದುವೆ ಸಮಾರಂಭದಲ್ಲೇ ವ್ಯಕ್ತಿಯ ಕೊಲೆಗೈದ ಮ್ಯೂಸಿಕ್ ಬ್ಯಾಂಡ್ ಸಿಬ್ಬಂದಿ
ಒಂದು ವೇಳೆ ಕಾಂಗ್ರೆಸ್, ಸಿಪಿಐಎಂ ಅಧಿಕಾರದಲ್ಲಿದ್ದಿದ್ದರೆ…ತ್ರಿಪುರಾದಲ್ಲಿ ಸಿಎಂ ಯೋಗಿ …
ಕೇಂದ್ರದಿಂದ ಕರ್ನಾಟಕಕ್ಕೆ ʻಹೆದ್ದಾರಿʼ ಭಾಗ್ಯ
ಜಮ್ಮು-ಕಾಶ್ಮೀರದಲ್ಲಿ ಚಿತ್ರಮಂದಿರಗಳು ಹೌಸ್ ಫುಲ್ ಆಗ್ತಿದೆ…ಕಾಂಗ್ರೆಸ್ ಗೆ ಮೋದಿ ತಿರುಗೇಟು