ರೇಬಿಸ್ ಲಸಿಕೆ ತಯಾರಿಸಲು ಕೇರಳ ಸರಕಾರ ಚಿಂತನೆ
Team Udayavani, Oct 17, 2017, 6:45 AM IST
ತಿರುವನಂತಪುರಂ: ಜನಸಾಮಾನ್ಯರಿಗೆ ರೇಬಿಸ್ ಲಸಿಕೆ ಕಡಿಮೆ ದರದಲ್ಲಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಹೊಸ ಯೋಜನೆಗೆ ಕೇರಳ ಸರಕಾರ ಮುಂದಾಗಿದೆ. ಲಸಿಕೆಯನ್ನು ರಾಜ್ಯದಲ್ಲೇ ತಯಾರಿಸಿ, 150ರೂ.ಗೆ ಅದನ್ನು ಲಭ್ಯವಾಗಿಸಲು ಚಿಂತನೆ ನಡೆಸಲಾಗಿದೆ.
ರಾಜ್ಯ ಪಶುಸಂಗೋಪನಾ ಇಲಾಖೆಯ ಪಲೋಡ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಆ್ಯನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯೊಲಾಜಿಕಲ್ಸ್(ಐಎಎಚ್‌ಆ್ಯಂಡ್‌ವಿಬಿ)ನ ಲ್ಯಾಬ್‌ನಲ್ಲಿ ಮನುಷ್ಯ ಮತ್ತು ಪಶುಗಳಿಗೆ ಪ್ರತ್ಯೇಕ ರೇಬಿಸ್ ಲಸಿಕೆ ಅಭಿವೃದ್ಧಿಪಡಿಸಲಾಗುವುದು. ಸುಧಾರಿತ ಜೀವಕೋಶ ಅಭಿವೃದ್ಧಿ ತಂತ್ರಜ್ಞಾನ ಬಳಸಿ ಲಸಿಕೆ ತಯಾರಿಸುವ ಯೋಚನೆ ಇದೆ. ಈ ಯೋಜನೆಯೊಂದಿದೆ ಕೇರಳ ಭಾರತದಲ್ಲೇ ಸ್ವಂತ ರೇಬಿಸ್ ಲಸಿಕೆ ಹೊಂದಿರುವ ಪ್ರಥಮ ರಾಜ್ಯವಾಗಲಿದೆ ಎಂದು ಪಶುಸಂಗೋಪನ ಇಲಾಖೆ ನಿರ್ದೇಶಕ ಎನ್‌ಎನ್ ಶಶಿ ತಿಳಿಸಿದ್ದಾರೆ.
ತಯಾರಿಕೆಗೆ ಸಂಬಂಧಿಸಿದ ಕೂಲಂಕಶ ವರದಿಯನ್ನು ಸರಕಾರಕ್ಕೆ ನೀಡಲಾಗಿದೆ. ಇನ್ನಾರು ತಿಂಗಳಲ್ಲಿ ಮೂಲಸೌಕರ್ಯ ನಿರ್ಮಾಣ ಮಾಡುವ ಗುರಿ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 6 ತಿಂಗಳಲ್ಲೇ ಕೆಲಸ ಆರಂಭಿಸಿ, 2ರಿಂದ 3 ವರ್ಷಗಳಲ್ಲಿ ಲಸಿಕೆ ತಯಾರಿಸಲು ಆರಂಭಿಸಲಾಗುತ್ತದೆ. ಈ ಯೋಜನೆಗೆ 150 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು