ಸಾಕ್ಷರತಾ ಪರೀಕ್ಷೆ ಬರೆದ 90ರ ಅಜ್ಜಿ!
Team Udayavani, Apr 28, 2018, 6:00 AM IST
ತಿರುವನಂತಪುರ: ನಗರದಲ್ಲಿ ಬದುಕು ಕಟ್ಟಿಕೊಂಡಿರುವ ಅನೇಕ ಮಂದಿ ತಮ್ಮ ಇಳಿ ವಯಸ್ಸಿನಲ್ಲೂ ಓದಿ, ಪರೀಕ್ಷೆ ಬರೆದಿರುವುದು ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ ಇಲ್ಲಿನ ಬುಡಕಟ್ಟು ಮಹಿಳೆಯೊಬ್ಬರು 90ನೇ ವರ್ಷದಲ್ಲಿ ಸಾಕ್ಷರತಾ ಪರೀಕ್ಷೆ ಬರೆದು ಅಚ್ಚರಿ ಮೂಡಿಸಿದ್ದಾರೆ.
ಕೇರಳದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಾಕ್ಕಾ ಇಳಿವಯಸ್ಸಿನಲ್ಲಿ ಪರೀಕ್ಷೆ ಬರೆದ ಮಹಿಳೆ. ವಯನಾಡ್ನಲ್ಲಿ ಕೇರಳ ಸಾಕ್ಷರತಾ ಮಿಷನ್ ಪ್ರಾಧಿಕಾರ ನಡೆಸಿರುವ ಸಾಕ್ಷರತಾ ಯೋಜನೆಯಡಿ ಪರೀಕ್ಷೆ ಬರೆದ 4500 ಮಂದಿಯಲ್ಲಿ ಈ ಅಜ್ಜಿ ಕೂಡ ಒಬ್ಬರು. ಮಾಕ್ಕಾ ಅವರಿಗೆ ಸಾಕ್ಷರತಾ ಯೋಜನೆಯ ಮೊದಲ ಪರೀಕ್ಷೆ ಇದಾಗಿದೆ. ಮಾಕ್ಕಾ ಕೇರಳ ಬುಡಕಟ್ಟು ಸಮುದಾಯದಲ್ಲೇ ಅತಿ ಹಿರಿಯ ಮಹಿಳೆ. ಅಂತೆಯೇ 16 ವರ್ಷದ ಲಕ್ಷ್ಮೀ ಎಂಬಾಕೆ ಈ ಪರೀಕ್ಷೆ ಬರೆದ ಕಿರಿಯ ಅಭ್ಯರ್ಥಿ. ಓದು, ಬರವಣಿಗೆ ಹಾಗೂ ಗಣಿತ ವಿಷಯಗಳ ಮೇಲೆ ಪರೀಕ್ಷೆ ಇರಲಿದ್ದು, ತಲಾ 100 ಅಂಕಗಳ ಪರೀಕ್ಷೆ ಇದಾಗಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ