ತೆಲಂಗಾಣ ಚಿತ್ರನಟ ಅನಿಲ್ ಪ್ರಯತ್ನಕ್ಕೆ ಮೆಚ್ಚುಗೆ
Team Udayavani, Aug 6, 2018, 10:47 AM IST
ಹೈದರಾಬಾದ್ : ವಿಶ್ವವ್ಯಾಪಿಯಾಗಿರುವ “ಕೀಕಿ ಡಾನ್ಸ್ ಚಾಲೆಂಜ್’ ಭಾರತದಲ್ಲೂ ಹವಾ ಸೃಷ್ಟಿಸಿದ್ದು, ಹಲವಾರು ನಟ, ನಟಿಯರು ಈ ಸವಾಲು ಸ್ವೀಕರಿಸಿ ಸುದ್ದಿಯಾಗಿದ್ದಾರೆ. ಆದರೆ, ಅವರೆಲ್ಲರಿಗಿಂತ ತೆಲಂಗಾಣದ ಉದಯೋ ನ್ಮುಖ ಚಿತ್ರನಟ ಅನಿಲ್ ಕುಮಾರ್ ಎಂಬುವರು, ಕೆಸರು ಗದ್ದೆಯಲ್ಲಿ ಕೀಕಿ ಡಾನ್ಸ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಚಲಿಸುತ್ತಿರುವ ಕಾರಿನಿಂದ ಕೆಳಗಿಳಿದು ಕಾರಿನ ಜತೆಯಲ್ಲೇ ಕೆನಡಾದ ರ್ಯಾಪರ್ ಡ್ರೇಕ್ ಅವರ ಮೆಗಾ ಹಿಟ್ ಹಾಡಾದ “ಇನ್ ಮೈ ಫೀಲಿಂಗ್ಸ್’ ಹಾಡಿಗೆ ನೃತ್ಯ ಮಾಡುವುದೇ ಕೀಕಿ ಚಾಲೆಂಜ್. ಈ ವರೆಗೆ ಈ ಸವಾಲು ಸ್ವೀಕರಿಸಿದ್ದವರೆಲ್ಲರೂ ಇದೇ ರೀತಿಯಲ್ಲೇ ನೃತ್ಯ ಪ್ರದರ್ಶಿಸಿದ್ದಾರೆ. ಆದರೆ, ಅನಿಲ್ ಕುಮಾರ್, ಈ ಸವಾಲನ್ನು ದೇಸೀ ಸ್ಟೈಲ್ನಲ್ಲಿ ಸ್ವೀಕರಿಸಿದ್ದು ಕೆಸರು ಗದ್ದೆಯಲ್ಲಿ ಸ್ನೇಹಿತ ನೊಂದಿಗೆ ಎತ್ತುಗಳೊಂದಿಗೆ ಸಾಗುತ್ತಾ ಕುಣಿದಿದ್ದಾರೆ. ಯೂ ಟ್ಯೂಬ್ನ “ಮೈ ವಿಲೇಜ್ ಶೊ’ ವಾಹಿನಿಯಲ್ಲಿ ಕೇವಲ ನಾಲ್ಕು ದಿನಗಳ ಹಿಂದೆ ಅಪ್ಲೋಡ್ ಆದ ಈ ವಿಡಿಯೋವನ್ನು ಈವರೆಗೆ 1.82 ಲಕ್ಷ ಮಂದಿ ವೀಕ್ಷಿಸಿದ್ದಾರೆ ಅಲ್ಲದೆ, ಇದೇ ವಾಹಿನಿಯ ಫೇಸ್ಬುಕ್ ಪೇಜ್ನಲ್ಲಿ 3.60 ಲಕ್ಷ ವೀಕ್ಷಣೆ ಹಾಗೂ 54 ಸಾವಿರ ಶೇರ್ಗಳನ್ನು ಕಂಡಿದೆ.
ಅಂದಹಾಗೆ, ಈ ದೃಶ್ಯಗಳನ್ನು ತಿರುಪತಿಯಲ್ಲಿನ ಅವರ ಸ್ನೇಹಿತನ ಹೊಲದಲ್ಲಿ ಚಿತ್ರೀಕರಿಸಿದ್ದು, ಇದು “ಮೈ ವಿಲೇಜ್ ಶೋ’ ವಾಹಿನಿಯ ನಿರ್ದೇಶಕ ಶ್ರೀಕಾಂತ್ ಅವರ ಪರಿಕಲ್ಪನೆ ಎಂದಿದ್ದಾರೆ ಅನಿಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
Hong Kong ಎವರೆಸ್ಟ್, ಎಂಡಿಎಚ್ ಮಸಾಲೆ ಬ್ಯಾನ್
MUST WATCH
ಹೊಸ ಸೇರ್ಪಡೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು