2ನೇ ಹೆಂಡತಿಯನ್ನು ಸೇರಲು ಮಗನ ಎದುರೇ ಪತ್ನಿಯ ಕೊಂದ ಪತಿ
Team Udayavani, Oct 26, 2017, 3:53 PM IST
ಹೊಸದಿಲ್ಲಿ : ತನ್ನ ಎರಡು ವರ್ಷ ಪ್ರಾಯದ ಮಗನ ಎದುರೇ ಗುಂಡೆಸೆದು ಕೊಲ್ಲಲ್ಪಟ್ಟಿದ್ದ 34ರ ಹರೆಯದ ದಿಲ್ಲಿ ಮಹಿಳೆಯ ನಿಗೂಢ ಕೊಲೆ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ.
ತನ್ನ ಎರಡನೇ ಹೆಂಡತಿ ಆಯಿಷಾ ಳನ್ನು ಸೇರಲು ತಾನು ತನ್ನ ಮೊದಲ ಹೆಂಡತಿ ಪ್ರಿಯಾ ಮೆಹ್ರಾ ಳನ್ನು ಕೊಂದೆ ಎಂದು ಆಕೆಯ ಪತಿ, ದಿಲ್ಲಿಯಲ್ಲಿ ರೆಸ್ಟೋರಾಂಟ್ ಮಾಲಕನಾಗಿರುವ ಪಂಕಜ್ ಮೆಹ್ರಾ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ನಿನ್ನೆ ಬುಧವಾರ ನಸುಕಿನ ವೇಳೆ ಪ್ರಿಯಾ ಗುಂಡೇಟಿಗೆ ಬಲಿಯಾಗಿದ್ದಳು. ದಿಲ್ಲಿಯ ಶಾಲಿಮಾರ್ ಬಾಗ್ನಲ್ಲಿ ತಾನು, ಹೆಂಡತಿ ಪ್ರಿಯಾ ಮತ್ತು ಮಗು, ಕಾರಿನಲ್ಲಿ ಸಾಗುತ್ತಿದ್ದಾಗ ಯಾರೋ ಅಪರಿಚಿತ ಹಂತಕರು ದಾಳಿ ನಡೆಸಿ ತನ್ನ ಹೆಂಡತಿ ಪ್ರಿಯಾಳನ್ನು ಗುಂಡಿಕ್ಕಿ ಸಾಯಿಸಿದರು ಎಂದು ಪತಿ ಪಂಕಜ್ ಮೆಹ್ರಾ ಪೊಲೀಸರಲ್ಲಿ ಹೇಳಿದ್ದ.
“ನನಗೆ ಸಾಲ ನೀಡಿದ್ದ ವ್ಯಕ್ತಿಯೇ ನನ್ನ ಹೆಂಡತಿಯನ್ನು ಕೊಲ್ಲಿಸಿದ್ದಾನೆ’ ಎಂದಿದ್ದ ಮೆಹ್ರಾಗೆ ಎರಡನೇ ಹೆಂಡತಿ ಇದ್ದು ಆಕೆಯನ್ನು ಸೇರಲು ತನ್ನ ಮೊದಲ ಹೆಂಡತಿಯನ್ನು ಯಾರೋ ಕೊಂದರೆಂದು ಆತ ನಾಟಕವಾಡಿದ ಎಂದು ಪೊಲೀಸ್ ಡೆಪ್ಯುಟಿ ಕಮಿಷನರ್ ಮಿಲಿಂದ್ ಮಹಾದೇವ್ ದುಂಬೆರೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ