ಕಿರಣ್‌ ಬೇಡಿ ಹಿಟ್ಲರ್‌ ತಂಗಿ

Team Udayavani, Nov 20, 2019, 12:45 AM IST

ಪುದುಚ್ಚೇರಿ: ಸಚಿವ ಸಂಪುಟದ ನಿರ್ಧಾರಗಳನ್ನು ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆ ಮಾಡಿರುವ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ, ಕಿರಣ್‌ ಬೇಡಿಯವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ಸಹೋದರಿಯಾಗಿದ್ದು, ಪುದುಚೇರಿಯಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ, ಕಿರಣ್‌ ಬೇಡಿ ಅವರ ವರ್ತನೆಯಿಂದ ನನ್ನ ಬಿಪಿ (ರಕ್ತದೊತ್ತಡ) ಏರುತ್ತದೆ ಎಂದೂ ಕಿಡಿಕಾರಿದ್ದಾರೆ. ಬೇಡಿಯವರು ಪ್ರತಿಬಾರಿ ಸರಕಾರದ ನಡೆಗಳಿಗೆ, ನಿರ್ಧಾರಗಳಿಗೆ ತಡೆ ಹಾಕಿದಾಗ ನಾರಾಯಣ ಸ್ವಾಮಿ ಈ ರೀತಿ ಟೀಕೆ ಮಾಡುತ್ತಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ