ಕೋಲ್ಕತಾ: ಭದ್ರತಾ ಸಿಬಂದಿಯಿಂದ ಗುಂಡಿನ ದಾಳಿ; ಓರ್ವ ಸಾವು
Team Udayavani, Aug 6, 2022, 10:10 PM IST
ಕೋಲ್ಕತಾ: ನಗರದ ಪಾರ್ಕ್ ಸ್ಟ್ರೀಟ್‌ನಲ್ಲಿರುವ ಇಂಡಿಯನ್ ಮ್ಯೂಸಿಯಂ ಕಟ್ಟಡದಲ್ಲಿ ಭದ್ರತಾ ಸಿಬಂದಿಯೊರವನಿಂದ ಗುಂಡಿನ ದಾಳಿ ನಡೆದ ಘಟನೆ ಶನಿವಾರ ವರದಿಯಾಗಿದ್ದು, ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಓರ್ವರು ಸಾವನ್ನಪ್ಪಿದ್ದು, ಮತ್ತೊಬ್ಬ ಡಿಎಸ್‌ಪಿ ಶ್ರೇಣಿಯ ಅಧಿಕಾರಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಸಿಐಎಸ್‌ಎಫ್ ಬ್ಯಾರಕ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ವರದಿಗಳ ಪ್ರಕಾರ, ಸಿಐಎಸ್‌ಎಫ್ ಸಿಬ್ಬಂದಿ ಎಕೆ-47 ರೈಫಲ್‌ನಿಂದ ಗುಂಡು ಹಾರಿಸಲಾಗಿದೆ.
ಕೋಲ್ಕತಾ ಪೊಲೀಸ್ ಕಮಾಂಡೋಗಳು ಮತ್ತು ಅರೆಸೇನಾ ಪಡೆಯ ಜಂಟಿ ತಂಡವು ಒಂದು ಗಂಟೆಯ ಕಾರ್ಯಾಚರಣೆಯ ನಂತರ ದಾಳಿಕೋರನನ್ನು ತಟಸ್ಥಗೊಳಿಸಿ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂಪೂರ್ಣ ಕಾರ್ಯಾಚರಣೆಯ ನೇತೃತ್ವವನ್ನು ನಗರ ಪೊಲೀಸ್ ಕಮಿಷನರ್, ವಿನೀತ್ ಗೋಯೆಲ್ ಅವರು ಸ್ಥಳಕ್ಕೆ ಧಾವಿಸಿ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ವಹಿಸಿದ್ದರು.
ಹತ್ಯೆಯಾದ ಸಿಐಎಸ್ಎಫ್ ಸಿಬಂದಿಯನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಂಜಿತ್ ಸರೋಂಗಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಸಿಐಎಸ್‌ಎಫ್ ಅಧಿಕಾರಿಯನ್ನು ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಹಾಯಕ ಕಮಾಂಡೆಂಟ್ ಶ್ರೇಣಿಯ ಅಧಿಕಾರಿ ಸುಬೀರ್ ಘೋಷ್ ಎಂದು ಗುರುತಿಸಲಾಗಿದೆ.
ಗುಂಡಿನ ದಾಳಿಯ ನಂತರ ಮ್ಯೂಸಿಯಂನಲ್ಲಿದ್ದ ದಾಳಿಕೋರ ಜವಾನನ ಗುರುತನ್ನು ಪೊಲೀಸರು ಅಥವಾ ಸಿಐಎಸ್ಎಫ್ ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಲ್ಲಿ ನಿತ್ಯ ಬೆಳಗ್ಗೆ ರಾಷ್ಟ್ರಗೀತೆ ಮೊಳಗುತ್ತೆ!
ಮಮತಾ ಆಪ್ತನ ವಿರುದ್ಧ ವ್ಯಾಪಕ ಆಕ್ರೋಶ; ಕೋರ್ಟ್ ಬಳಿ ಚಪ್ಪಲಿ ಪ್ರದರ್ಶನ
ಉತ್ತರಪ್ರದೇಶ: ಯಮುನಾ ನದಿಯಲ್ಲಿ ದೋಣಿ ಮುಳುಗಿ 20ಕ್ಕೂ ಅಧಿಕ ಮಂದಿ ಸಾವು?
ಪ್ರಾಣಿಗಳೂ ಈ ಆಹಾರ ತಿನ್ನಲ್ಲ..: ಮೆಸ್ ಫುಡ್ ಬಗ್ಗೆ ಆಕ್ರೋಶ ಹೊರಹಾಕಿದ ಉ.ಪ್ರದೇಶ ಪೊಲೀಸ್
ಮೀನು ಮಾರಾಟ ಮಾಡುತ್ತಿದ್ದ ಮಮತಾ ಆಪ್ತ ಮಂಡಲ್ ಇಂದು ಸಾವಿರ ಕೋಟಿ ಆಸ್ತಿ ಒಡೆಯ!