ಕಾರಿನ ಫ್ರಂಟ್ ಡೋರ್ ಕವರ್ ಒಳಗೆ 3 ಕೋಟಿ ರೂ. ಮೌಲ್ಯದ “ಯಾಬಾ” ಮಾದಕ ದ್ರವ್ಯ ಪತ್ತೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ, ಬಿಹಾರದ ವ್ಯಕ್ತಿಗಳನ್ನು ಹಾಗೂ ಕಾರು ಚಾಲಕನನ್ನು ಬಂಧಿಸಿ ವಿಚಾರಣೆ
Team Udayavani, Feb 12, 2020, 5:57 PM IST
ನವದೆಹಲಿ/ಕೋಲ್ಕತಾ:ಮಾದಕ ದ್ರವ್ಯ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ಕೋಲ್ಕತಾ ಪೊಲೀಸ್ ಸ್ಪೆಷಲ್ ಟಾಸ್ಕ್ ಪೋರ್ಟ್ (ಎಸ್ ಟಿಎಫ್) ಬಂಧಿಸಿದ್ದು, ಸುಮಾರು 13.5 ಕಿಲೋ ಗ್ರಾಂನಷ್ಟು ಮಾದಕ ವಸ್ತು ತುಂಬಿದ್ದ ಮಾತ್ರೆಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
13.5 ಕಿಲೋ ಗ್ರಾಂ ಮಾದಕ ದ್ರವ್ಯದ ಮಾರುಕಟ್ಟೆ ಬೆಲೆ 3.5 ಕೋಟಿ ರೂಪಾಯಿಗಿಂತಲೂ ಅಧಿಕ ಎಂದು ವರದಿ ವಿವರಿಸಿದೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ ವೇಳೆ ಕಾರಿನ ಮುಂಭಾಗದ ಬಾಗಿಲಿನ ಕವರ್ ಒಳಗೆ ಟ್ಯಾಬ್ಲೆಟ್ಸ್ ಅಡಗಿಸಿ ಇಟ್ಟಿರುವುದಾಗಿ ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಡೋರ್ ಕವರ್ ಕತ್ತರಿಸಿ ತೆಗೆದಾಗ ಅಪಾರ ಪ್ರಮಾಣದ “ಯಾಬಾ” ಎಂಬ ಹೆಸರಿನ ಮಾದಕ ದ್ರವ್ಯದ ಟ್ಯಾಬ್ಲೆಟ್ ಪ್ಯಾಕೇಟ್ ದೊರೆತಿರುವುದಾಗಿ ವರದಿ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ, ಬಿಹಾರದ ವ್ಯಕ್ತಿಗಳನ್ನು ಹಾಗೂ ಕಾರು ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಮಣಿಪುರ್ ನಿವಾಸಿ ಮೊಹಮ್ಮದ್ ಅಮಿರ್ ಖಾನ್, ಮಣಿಪುರದ ಮೊಹಮ್ಮದ್ ನಜೀರ್ ಹುಸೈನ್ ಹಾಗೂ ಬಿಹಾರದ ಜಾಗೆಸರ್ ಮಹಾತೋ ಸೇರಿದಂತೆ ಮೂವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ