ಮಹಿಳೆಯರಿಗೆ ಮೀಸಲು ಕೊಟ್ಟದ್ದಕ್ಕೆ ಹಿಂಸಾಚಾರ
Team Udayavani, Feb 3, 2017, 3:45 AM IST
ಕೊಹಿಮಾ: ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲು ನೀಡಬೇಕೆಂದು ಆಗಾಗ ಒತ್ತಾಯ ಕೇಳಿ ಬರುತ್ತಿದೆ. ಶೇ.33ರಷ್ಟು ಮೀಸಲು ನೀಡಬೇಕೆಂದು ಸಂಸತ್ನಲ್ಲಿ ಮಸೂದೆಯನ್ನೂ ಮಂಡನೆ ಮಾಡಲಾಗಿತ್ತು. ಆದರೆ ನಾಗಾಲ್ಯಾಂಡ್ ರಾಜಧಾನಿ ಕೊಹಿಮಾದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ನೀಡಿರುವ ಶೇ 33 ಮಹಿಳಾ ಮೀಸಲಾತಿಯನ್ನು ವಾಪಸ್ ಪಡೆಯಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು 10 ಸಾವಿರಕ್ಕೂ ಹೆಚ್ಚು ಮಂದಿ ಗುಡ್ಡಗಾಡು ಜನರು ಸರ್ಕಾರಿ ಕಚೇರಿಗಳಿಗೆ, ವಾಹನಗಳಿಗೆ ಬೆಂಕಿಹಚ್ಚಿ ದಾಂದಲೆ ನಡೆಸಿದ್ದಾರೆ. ಮೀಸಲು ಕಲ್ಪಿಸಿರುವುದು ನಾಗ ಜನರಿಗೆ, ಗುಡ್ಡಗಾಡು ಜನರಿಗೆ ಮಾಡಿದ ಅನ್ಯಾಯವಾಗಿದ್ದು, ಇದಲ್ಲದೆ ಸಂವಿಧಾನದ 371 (ಎ) ನಿಯಮಕ್ಕೆ ವಿರುದ್ಧವಾಗಿದೆ.ಈ ಘಟನೆ ಬಳಿಕ ನಾಗಾಲ್ಯಾಂಡ್ನಾದ್ಯಂತ ಮೊಬೈಲ್ ಇಂಟರ್ನೆಟ್ ಅನ್ನು ನಿಷೇಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರದ ಅರೆಸೇನಾ ಪಡೆಗಳನ್ನು ರವಾನಿಸಲಾಗಿದೆ. ಈ ನಡುವೆ ಪ್ರತಿಭಟನಾಕಾರರತ್ತ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ