ಕೋವಿಡ್-19 ಪಸರಿಸಿದ ಚೀನದ ಜೀವರಕ್ಷಕ ನಾಟಕ
Team Udayavani, Mar 30, 2020, 6:30 AM IST
ಸಾಂದರ್ಭಿಕ ಚಿತ್ರ..
ಹೊಸದಿಲ್ಲಿ: ಇಡೀ ಜಗತ್ತಿಗೆ ಕೋವಿಡ್-19 ಪಸರಿಸಿದ ಚೀನ ಈಗ ಅದರಿಂದ ಚೇತರಿಸಿಕೊಂಡ ಬೆನ್ನಿಗೇ ಆ ಕಾಯಿಲೆಗೆ ಅಗತ್ಯವಾಗಿ ಬೇಕಾಗಿರುವ ವೈದ್ಯಕೀಯ ಸಾಮಗ್ರಿಗಳ ಬೃಹತ್ ಪ್ರಮಾಣದ ಉತ್ಪಾದನೆಯನ್ನು ಆರಂಭಿಸಿದೆ.
ಕೋವಿಡ್-19 ರುದ್ರತಾಂಡವ ಆಡುತ್ತಿರುವ ರಾಷ್ಟ್ರಗಳಿಗೆ ಅತ್ಯಗತ್ಯವಾಗಿ ಬೇಕಿರುವ ಜೀವರಕ್ಷಕ ಸಾಧನವಾದ ವೆಂಟಿಲೇಟರ್‌ಗಳನ್ನು ಭಾರೀ ಪ್ರಮಾಣದಲ್ಲಿ ತಯಾರಿಸುವಲ್ಲಿ ಅದೀಗ ನಿರತವಾಗಿದೆ.
ಚೀನದ ಮೂಲೆಮೂಲೆಗಳ ಕಾರ್ಖಾನೆಗಳಲ್ಲಿ ವೆಂಟಿಲೇಟರ್‌ಗಳನ್ನು ಸಮರೋಪಾದಿಯಲ್ಲಿ ತಯಾರಿಸಲಾಗುತ್ತಿದೆ. ಮಾತ್ರವಲ್ಲದೆ ಥರ್ಮೋಮೀಟರ್‌ಗಳು, ಫೇಸ್ ಮಾಸ್ಕ್ಗಳು, ವೈದ್ಯರು ಹಾಕಿಕೊಳ್ಳುವ ರೋಗ ನಿರೋಧಕ ಪ್ಲಾಸ್ಟಿಕ್ ಕೋಟ್‌ಗಳನ್ನೂ ಕೋಟ್ಯಂತರ ಸಂಖ್ಯೆಯಲ್ಲಿ ಉತ್ಪಾದಿಸಲಾಗುತ್ತಿದೆ.
ಕೋಟ್ಯಂತರ ಆರ್ಡರ್‌ಗಳು
ವುಹಾನ್‌ನಲ್ಲಿ ಉಗಮವಾಗಿ ಈಗ ವಿಶ್ವದ ತುಂಬೆಲ್ಲ ಹಾಹಾಕಾರ ನಡೆಸುತ್ತಿರುವ ಕೋವಿಡ್-19 ಈಗ ತನ್ನ ತವರಿನಲ್ಲಿ ಹತೋಟಿಗೆ ಬಂದಿದೆ. ಹಾಗಾಗಿ ಚೀನದ ಕೈಗಾರಿಕಾ ವಲಯ ಈಗ ಮತ್ತೆ ಸದ್ದು ಮಾಡತೊಡಗಿದ್ದು, ಕೋಟಿ ಗಟ್ಟಲೆ ಉಪಕರಣಗಳ ಆರ್ಡರ್ ಪಡೆದಿವೆ.
ಟೆಸ್ಟ್ ಕಿಟ್ ವಾಪಸ್
ಲಕ್ಷಾಂತರ ಡಾಲರ್ ತೆತ್ತು ಚೀನದಿಂದ ವೈದ್ಯಕೀಯ ಸಲಕರಣೆಗಳನ್ನು ಪಡೆದಿರುವ ಸ್ಪೇನ್ ಕಳಪೆ ಗುಣಮಟ್ಟದ ಕಾರಣಕ್ಕಾಗಿ 9 ಸಾವಿರ ಟೆಸ್ಟ್ ಕಿಟ್‌ಗಳನ್ನು ಚೀನಕ್ಕೆ ವಾಪಸ್ ಕಳುಹಿಸಲು ನಿರ್ಧ ರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಾಣಿಗಳೂ ಈ ಆಹಾರ ತಿನ್ನಲ್ಲ..: ಮೆಸ್ ಫುಡ್ ಬಗ್ಗೆ ಆಕ್ರೋಶ ಹೊರಹಾಕಿದ ಉ.ಪ್ರದೇಶ ಪೊಲೀಸ್
ಮೀನು ಮಾರಾಟ ಮಾಡುತ್ತಿದ್ದ ಮಮತಾ ಆಪ್ತ ಮಂಡಲ್ ಇಂದು ಸಾವಿರ ಕೋಟಿ ಆಸ್ತಿ ಒಡೆಯ!
ರಾಜಕೀಯ ಪಕ್ಷಗಳ ಉಚಿತ ಕೊಡುಗೆ ದೇಶದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ: ಸುಪ್ರೀಂಕೋರ್ಟ್
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 16,299 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ
ದೇಶದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಪ್ರಮಾಣವಚನ ಸ್ವೀಕಾರ