“ಮದ್ಯ”ದಂಗಡಿಯಲ್ಲಿ ಹತ್ತು ರೂ.ಗಾಗಿ ಗೆಳೆಯರ ನಡುವೆ ಮಾರಾಮಾರಿ, ಕೊಲೆ ಯತ್ನ!

Team Udayavani, Nov 18, 2019, 5:42 PM IST

ಆಂಧ್ರಪ್ರದೇಶ: ಹತ್ತು ರೂಪಾಯಿ ಸಾಲದ ವಿಚಾರವಾಗಿ ಇಬ್ಬರು ಕುಡುಕರ ನಡುವೆ ಮಾರಾಮಾರಿ ನಡೆದಿದ್ದು, ಕೊಲೆ ಯತ್ನ ನಡೆಸಿರುವ ಘಟನೆ ಕರ್ನೂಲ್ ನ ಸುನ್ನಿಪೆಂಟಾ ವೈನ್ ಶಾಪ್ ನಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಇಬ್ಬರ ವಿರುದ್ಧವೂ ಕೊಲೆ ಯತ್ನ ನಡೆಸಿರುವ ಆರೋಪದಡಿ ಸುನ್ನಿಪೆಂಟಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವುದಾಗಿ ಡಿವೈಎಸ್ಪಿ ವೆಂಕಟ್ ರಾವ್ ತಿಳಿಸಿದ್ದಾರೆ.

ರಿಕ್ಷಾ ಚಾಲಕ ಮೌಲಾಲಿ ಹಾಗೂ ಗೆಳೆಯ ಶಿವ ಇಬ್ಬರು ಮದ್ಯವನ್ನು ಕುಡಿದಿದ್ದರು. ಬಳಿಕ ಮೌಲಾಲಿ ಗೆಳೆಯನ ಬಳಿ ಹತ್ತು ರೂಪಾಯಿ ಸಾಲ ಕೇಳಿದ್ದ. ಆಗ ಶಿವ ಮೌಲಾಲಿಯ ತಾಯಿ ಮತ್ತು ಸಹೋದರಿಯ ವಿರುದ್ಧ ಅವಾಚ್ಯವಾಗಿ ಬೈದಿದ್ದ.

ಇದರಿಂದ ಕೋಪಗೊಂಡ ಮೌಲಾಲಿ ಬಿಯರ್ ಬಾಟಲ್ ಒಡೆದು ಶಿವನ ಗಂಟಲನ್ನು ಸೀಳಲು ಮುಂದಾಗಿದ್ದ. ಇಬ್ಬರ ನಡುವೆಯೂ ಮಾರಾಮಾರಿ ನಡೆದಿತ್ತು. ಅಷ್ಟರಲ್ಲಿ ವೈನ್ ಶಾಪ್ ನಲ್ಲಿದ್ದ ಕೆಲವರು ಮಧ್ಯಪ್ರವೇಶಿಸಿ ಅನಾಹುತವನ್ನು ತಪ್ಪಿಸಿದ್ದರು.

ಮೌಲಾಲಿ ಗಾಯಗೊಂಡಿದ್ದು, ಆತನನ್ನು ಕೂಡಲೇ ಮರ್ಕಾಪುರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಕರ್ನೂಲ್ ಜನರಲ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಡಿವೈಎಸ್ಪಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ