1962ರಲ್ಲಿ ಚೀನಾ ಭಾರತದ ಎಷ್ಟು ಜಾಗ ವಶಪಡಿಸಿಕೊಂಡಿತ್ತು ಗೊತ್ತಾ? ರಾಹುಲ್ ಗೆ ಖಡಕ್ ತಿರುಗೇಟು
ಲಡಾಖ್ ನ ಒಂದಿಂಚೂ ಭೂಮಿಯನ್ನು ಚೀನಿಯರ ಸ್ವಾಧೀನಕ್ಕೆ ಬಿಟ್ಟುಕೊಟ್ಟಿಲ್ಲ ಎಂಬುದನ್ನು ಜಮ್ಯಾಂಗ್ ಸಾಕ್ಷಿ ಸಹಿತ ವಿವರ
Team Udayavani, Jun 10, 2020, 4:13 PM IST
ನವದೆಹಲಿ: ಭಾರತ, ಚೀನಾ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಳಿರುವ ಪ್ರಶ್ನೆಗೆ ಲಡಾಖ್ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಖಡಕ್ ತಿರುಗೇಟನ್ನು ನೀಡಿದ್ದಾರೆ. ಒಂದು ವೇಳೆ ಲಡಾಖ್ ನಲ್ಲಿ ಚೀನಾ ಭಾರತದ ಎಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂಬುದನ್ನು ಭಾರತ ಸರ್ಕಾರ ವಿವರಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಕೇಳಿರುವ ಪ್ರಶ್ನೆಗೆ ಜಮ್ಯಾಂಗ್ ಈ ರೀತಿ ಕಟು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಲಡಾಖ್ ನ ಒಂದಿಂಚೂ ಭೂಮಿಯನ್ನು ಚೀನಿಯರ ಸ್ವಾಧೀನಕ್ಕೆ ಬಿಟ್ಟುಕೊಟ್ಟಿಲ್ಲ ಎಂಬುದನ್ನು ಜಮ್ಯಾಂಗ್ ಸಾಕ್ಷಿ ಸಹಿತವಾಗಿ ಭಾರತದ ಭೂಮಿ ಸುರಕ್ಷಿತವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ ಚೀನಾ ಭಾರತದ ಭೂಮಿಯನ್ನು ಕಬಳಿಸಿತ್ತು…ಇದು ನಡೆದದ್ದು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ. 1962ರ ಯುದ್ಧದಲ್ಲಿ ಚೀನಾ ಪೂರ್ವ ಲಡಾಖ್ ಪ್ರದೇಶವನ್ನು ವಶಪಡಿಸಿಕೊಂಡು ಅಕ್ಸಾಯಿ ಚಿನ್ ನ ಸುಮಾರು 38 ಸಾವಿರ ಚದರ ಕಿಲೋ ಮೀಟರ್ ಭೂಮಿಯನ್ನು ಆಕ್ರಮಿಸಿಕೊಂಡಿತ್ತು ಎಂಬುದಾಗಿ ಜಮ್ಯಾಂಗ್ ರಾಹುಲ್ ಗೆ ತಿರುಗೇಟು ನೀಡಿದ್ದಾರೆ.
ಚೀನಾ ಭಾರತದ ಭೂಮಿಯನ್ನು ಹೇಗೆ ವಶಪಡಿಸಿಕೊಂಡಿತ್ತು ಎಂಬುದನ್ನು 34ರ ಹರೆಯದ ಬಿಜೆಪಿ ಸಂಸದ ನಮ್ಗ್ಯಾಲ್ ವಿವರಿಸಿದ್ದು, ರಾಹುಲ್ ಗಾಂಧಿ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನನ್ನ ಸತ್ಯಾಧಾರಿತ ಪ್ರತಿಕ್ರಿಯೆಯನ್ನು ಒಪ್ಪುವುದಾದರೆ ಕಾಂಗ್ರೆಸ್ ಮತ್ತೊಮ್ಮೆ ದಿಕ್ಕುತಪ್ಪಿಸುವ ಹೇಳಿಕೆಯನ್ನು ನೀಡಲಾರದು ಎಂಬ ಭರವಸೆ ಹೊಂದಿರುವುದಾಗಿ ಜಮ್ಯಾಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಆಡಳಿತಾರೂಢ ಕೇಂದ್ರ ಸರ್ಕಾರದ ವಿರುದ್ಧ ಸತತವಾಗಿ ಟೀಕೆ ವ್ಯಕ್ತಪಡಿಸುತ್ತ ಬಂದಿದ್ದ ರಾಹುಲ್ ಗಾಂಧಿ ಬುಧವಾರವೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು, ಚೀನಾ ಸೇನೆ ಲಡಾಖ್ ನಲ್ಲಿರುವ ನಮ್ಮ ಸರಹದ್ದಿನೊಳಗೆ ಬಂದು ಭೂಮಿಯನ್ನು ವಶಪಡಿಸಿಕೊಂಡಿತ್ತು. ಆದರೆ ನಮ್ಮ ಪ್ರಧಾನಿ ಮೌನವಾಗಿದ್ದರು. ಅಲ್ಲದೇ ಈ ವಿವಾದದಿಂದ ದೂರ ಉಳಿದುಬಿಟ್ಟಿದ್ದರು ಎಂದು ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಕ್ ಗಡಿಯಲ್ಲಿ ಬಾಂಬ್, ಗ್ರೆನೇಡ್ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ
ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್ ರೈಲುಗಳಿಗೆ ಕಲ್ಲು ತೂರಾಟ!
ಶಕ್ತಿಮಾನ್ ನಂತೆ ಸಾಹಸ ಪ್ರದರ್ಶನ ಮಾಡಲು ಹೋಗಿ ಜೈಲುಪಾಲಾದ ಮೂವರು ಯುವಕರು: ಇಲ್ಲಿದೆ ವಿಡಿಯೋ
ಭಾರತವು ಠಾಕ್ರೆ- ಮೋದಿಗೆ ಸೇರಿದ್ದಲ್ಲ, ಭಾರತವು..: ಅಸಾದುದ್ದೀನ್ ಓವೈಸಿ
ಮೋದಿ ಸರ್ಕಾರಕ್ಕೆ 8 ವರ್ಷ: ನಾಳೆಯಿಂದ ಬಿಜೆಪಿ ಜನಸಂಪರ್ಕ ಕಾರ್ಯಕ್ರಮ