ಬ್ಯಾಗ್ನಲ್ಲಿ ಭ್ರೂಣ ತಂದು ಅತ್ಯಾಚಾರ ದೂರು ಕೊಟ್ಟಳು
Team Udayavani, Jul 23, 2018, 10:24 AM IST
ಲಕ್ನೋ: ಉತ್ತರ ಪ್ರದೇಶದ ಅನ್ರೋಹಾದಲ್ಲಿ ಮಹಿಳೆಯೊಬ್ಬಳು ಅತ್ಯಾಚಾರ ದೂರು ನೀಡಲು ಐದು ತಿಂಗಳ ಭ್ರೂಣವನ್ನು ಬ್ಯಾಗ್ನಲ್ಲಿಟ್ಟುಕೊಂಡು ಪೊಲೀಸ್ ಸ್ಟೇಷನ್ಗೆ ಬಂದ ವಿಚಿತ್ರ ಘಟನೆ ವರದಿಯಾಗಿದೆ. ಆರು ತಿಂಗಳ ಹಿಂದೆ ನನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ. ಗರ್ಭಧರಿಸಿದ ಅನಂತರ ಬಲವಂತವಾಗಿ ನನಗೆ ಸಂತಾನ ಹರಣ ಮಾತ್ರೆಗಳನ್ನು ನೀಡಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದಾಳೆ. ಆದರೆ ಆರೋಪಿಯೊಂದಿಗೆ ಮಹಿಳೆ ಸಂಬಂಧ ಹೊಂದಿದ್ದಳು. ಮದುವೆ ತಪ್ಪಿಸಿಕೊಳ್ಳಲು ಆರೋಪಿಯು ಆಕೆಯ ಗರ್ಭಪಾತ ಮಾಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೊಂದೆಡೆ, ಮಧ್ಯಪ್ರದೇಶದಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, ಮಹಿಳೆ ನಾಲ್ಕು ತಿಂಗಳ ಭ್ರೂಣವನ್ನು ಬ್ಯಾಗ್ ನಲ್ಲಿಟ್ಟುಕೊಂಡು ಪೊಲೀಸ್ ಸ್ಟೇಷನ್ಗೆ ಬಂದು ಅತ್ಯಾಚಾರ ದೂರು ನೀಡಿದ್ದಾಳೆ. ನಾಲ್ವರು ನಾಲ್ಕು ತಿಂಗಳ ಹಿಂದೆ ಅತ್ಯಾಚಾರಗೈದಿದ್ದು, ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರಿದ್ದಾಳೆ. ನಾಲ್ವರು ಆರೋಪಿಗಳನ್ನೂ ಆಕೆ ದೂರಿನಲ್ಲಿ ಹೆಸರಿಸಿದ್ದಾಳೆ.