ಗೋವಾ: ಸುಯೆಲ್ಲಾ ಪೂರ್ವಿಕರ ಜಮೀನು ಕಬಳಿಕೆ; ಆರೋಪ
Team Udayavani, Sep 10, 2022, 8:45 PM IST
ಪಣಜಿ: ಬ್ರಿಟನ್ ಗೃಹ ಸಚಿವೆ ಸುಯೆಲ್ಲಾ ಬ್ರೇವರ್ಮ್ಯಾನ್ ಅವರ ತಂದೆ ಕ್ರಿಸ್ಟಿ ಫೆರ್ನಾಂಡಿಸ್ ಅವರ ಪೂರ್ವಜರ 2 ಜಮೀನು ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಗೋವಾದ ಅಸ್ಸಾಗೋದಲ್ಲಿ 13,900 ಚದರ ಮೀಟರ್ ಜಾಗವನ್ನು ಅಪರಿಚಿತ ವ್ಯಕ್ತಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಜುಲೈನಲ್ಲಿ ವಕೀಲರೊಬ್ಬರ ಮೂಲಕ ಅಪರಿಚಿತರು ಕೆಲಸ ಮಾಡಿಸಿದ್ದಾರೆ. ಆಗಸ್ಟ್ನಲ್ಲಿ ವಿಷಯ ತಮ್ಮ ಗಮನಕ್ಕೆ ಬಂದಿದೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಗಂಭೀರವಾಗಿ ತನಿಖೆ ಶುರು ಮಾಡಿದ್ದಾರೆ. ಈ ಅಂಶವನ್ನು ಒತ್ತುವರಿ ಪ್ರಕರಣಗಳಿಗಾಗಿ ರಚನೆ ಮಾಡಲಾಗಿರುವ ವಿಶೇಷ ತನಿಖಾ ದಳದ ಎಸ್ಪಿ ನಿಧಿ ವಾಸನ್ ಕೂಡ ಖಚಿತಪಡಿಸಿದ್ದಾರೆ.