ಹುತಾತ್ಮ ಯೋಧನ ಪತ್ನಿ ಸೇನೆಗೆ ಸೇರ್ಪಡೆ
Team Udayavani, Nov 21, 2021, 6:50 AM IST
ಚೆನ್ನೈ: 2018ರಲ್ಲಿ ಜಮ್ಮು ಕಾಶ್ಮೀರದ ಕುಲ್ಗಾಮ್ನಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾಗಿದ್ದ ಮೇಜರ್ ದೀಪಕ್ ನೈನಾವಾಲ್ ಅವರ ಪತ್ನಿ ಜ್ಯೋತಿ ನೈನಾವಾಲ್ ಅವರು ಶನಿವಾರದಂದು ಅಧಿಕೃತವಾಗಿ ಸೇನೆ ಸೇರಿದ್ದಾರೆ.
ಚೆನ್ನೈಯ ಸೇನಾ ತರಬೇತಿ ಕೇಂದ್ರದಲ್ಲಿ 11 ತಿಂಗಳ ತರಬೇತಿ ಪೂರ್ಣ ಗೊಳಿಸಿದ ಒಟ್ಟು 153 ಭಾರತೀಯ ಕೆಡೆಟ್ಗಳನ್ನು ಶನಿವಾರ ಅಧಿಕೃತವಾಗಿ ಸೇನೆಗೆ ಸೇರ್ಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಜ್ಯೋತಿಯೂ ಸೇರಿದ್ದಾರೆ. ಜ್ಯೋತಿಯವರಿಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಲಾಗಿದೆ.
ಅಮ್ಮ ನನಗೆ ಸ್ಫೂರ್ತಿ: ಜ್ಯೋತಿಯವರ ಸೇನಾ ಸೇರ್ಪಡೆ ಅವರ ಪುತ್ರಿ ಲಾವಣ್ಯಳಿಗೂ ಸ್ಫೂರ್ತಿ ನೀಡಿದೆಯಂತೆ. “ನನ್ನ ಅಮ್ಮ ಸೇನೆ ಸೇರುವುದಾಗಿ ಯಾವಾಗಲೂ ಹೇಳುತ್ತಿದ್ದಳು. ಇಂದು ಅವಳ ಕನಸು ನನಸಾಗಿದೆ. ನಾನು ವೈದ್ಯೆಯಾಗುವ ಕನಸು ಕಂಡಿದ್ದೆ. ಆದರೆ ನನ್ನ ಅಪ್ಪ ಹುತಾತ್ಮರಾದ ಅನಂತರ ಸೇನೆಯ ವೈದ್ಯೆಯೇ ಆಗಬೇಕೆಂದು ನಿರ್ಧರಿಸಿ ದ್ದೇನೆ’ ಎಂದು ಜ್ಯೋತಿಯವರ ಮಗಳು, 11 ವರ್ಷದ ಲಾವಣ್ಯ ಖುಷಿಯಿಂದ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ