ಪ್ರಖ್ಯಾತ ಹಿಂದುಸ್ಥಾನಿ ಗಾಯಕಿ ಅನ್ನಪೂರ್ಣ ದೇವಿ ಇನ್ನಿಲ್ಲ
Team Udayavani, Oct 13, 2018, 10:58 AM IST
ಮುಂಬಯಿ: ಪ್ರಖ್ಯಾತ ಹಿಂದುಸ್ಥಾನಿ ಗಾಯಕಿ ಅನ್ನಪೂರ್ಣ ದೇವಿ (91) ಅವರು ವಾರ್ಧಕ್ಯದಿಂದ ನಗರದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶನಿವಾರ ನಸುಕಿನ 3.51 ರ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.
ಸಂಗೀತ ಲೊಕಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು ಪ್ರಖ್ಯಾತ ಸಂಗೀತ ದಿಗ್ಗಜ ಅಲ್ಲಾವುದ್ದೀನ್ ಖಾನ್ ಅವರ ಪುತ್ರಿಯಾಗಿದ್ದರು. ಸೀತಾರ್ ಮಾಂತ್ರಿಕ ರವಿಶಂಕರ್ ಅವರನ್ನು ವಿವಾಹವಾದ ಬಳಿಕ ಅನ್ನಪೂರ್ಣ ಆಗಿದ್ದರು.
ಅನ್ನಪೂರ್ಣ ದೇವಿ ಅವರ ನಿಧನಕ್ಕೆ ಅಪಾರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.