ವಡೋದರ: ಅಪರಿಚಿತ ವಾಹನ ಹರಿದು ಚಿರತೆ ಸಾವು

Team Udayavani, Dec 23, 2017, 4:43 PM IST

ವಡೋದರ : ಇಲ್ಲಿಂದ 90 ಕಿ.ಮೀ. ದೂರದ ಜಗದಿಯಾ ಎಂಬಲ್ಲಿನ ಗೋವಳಿ ಗ್ರಾಮದಲ್ಲಿ ಅಪರಿಚಿತ ವಾಹನವೊಂದು ಹರಿದು ಚಿರತೆಯೊಂದು ಮೃತಪಟ್ಟಿತೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ರಾಜೇಂದ್ರಸಿಂಗ್‌ ಅನೂಪ್‌ ಸಿನ್ಸಾ ಮತ್ತು ದೋಲತ್‌ ಸಿನ್ಹ ಎಂಬ ಸ್ಥಳೀಯ ನಿವಾಸಿಗಳು ಹೊಲವೊಂದರಲ್ಲಿ  ಚಿರತೆಯ ಮೃತ ದೇಹವನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. 

ಚಿರತೆಯು ಸುಮಾರು 3 ವರ್ಷ ಪ್ರಾಯದ್ದಿದ್ದು ಆಹಾರವನ್ನು ಅರಸಿಕೊಂಡು ಇಲ್ಲಿಗೆ ಬಂದಿರಬಹುದು ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ. 

ಜಗದಿಯಾ, ನೇತ್ರಂಗ್‌ ಮತ್ತು ದೇದಿಯಾಪಾಡ ತೆಹಶೀಲ್‌ಗೆ ತಾಗಿಕೊಂಡಿರುವ ಹೆದ್ದಾರಿಯಲ್ಲಿ ಚಿರತೆಗಳ ಆಗೀಗ ಎಂಬಂತೆ ಸಾಯುವುದು ಕಳವಕಳಕಾರಿ ಸಂಗತಿಯಾಗಿದೆ ಎಂದವರು ವಿಷಾದಿಸಿದ್ದಾರೆ. 

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ