ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಚಿರತೆ: ವಿಡಿಯೋ ವೈರಲ್

Team Udayavani, Oct 20, 2019, 2:10 PM IST

ನವದೆಹಲಿ: ಸಾವಿನ ದವಡೆಯಿಂದ ಕೂದಲೆಳೆ ಅಂತರಲ್ಲಿ ಪಾರಾಗುವ ಅದೆಷ್ಟೋ ಘಟನೆಗಳು ಜರುಗಿವೆ. ಇಲ್ಲೊಂದೆಡೆ ಚಿರತೆಯೊಂದು ಹೈನಾ ದಾಳಿಯಿಂದ ಕಣ್ಣು ಮಿಟುಕಿಸುವುದರಲ್ಲಿ ಪಾರಾಗಿ ಜೀವ ಉಳಿಸಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಲ್ಲಿರುವ 9 ಸೆಕೆಂಡುಗಳ ವಿಡಿಯೋದಲ್ಲಿ , ಚಿರತೆಯೊಂದು  ಹೈನಾದಿಂದ ತಪ್ಪಿಸಿಕೊಂಡು ಮರವೇರಿ ಕುಳಿತುಕೊಂಡಿದೆ. ಆದರೇ ಹೈನಾ ಎಂಬ ಪ್ರಾಣಿಯ ವೈಶಿಷ್ಟ್ಯವೆಂದರೇ ಎಂತಹ ಬಲಾಢ್ಯ ಬೇಟೆಯಿದ್ದರೂ ಪಾರಾಗಲು ಬಿಡುವದಿಲ್ಲ. ಬದಲಾಗಿ ಗುಂಪು ಗುಂಪಾಗಿ ದಾಳಿ ನಡೆಸಿ ತನ್ನ ಆಹಾರವನ್ನು ಧಕ್ಕಿಸಿಕೊಳ್ಳುತ್ತದೆ. ಅಪರೂಪದ ಸಂದರ್ಭದಲ್ಲಿ ಮಾತ್ರ ಕೆಲವು ಪ್ರಾಣಿಗಳು ತಪ್ಪಿಸಿಕೊಳ್ಳುತ್ತದೆ.

ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದ ಈ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಮಾಡಿದ್ದಾರೆ. ಸಿಂಹ ಹಾಗೂ ಹೈನಾಗಳು ಮಾತ್ರ ಚಿರತೆಗಳ ಮೇಲೆ ಆಕ್ರಮಣ ಮಾಡುತ್ತವೆ . ಆದರೇ ಹೈನಾ ಹೆಚ್ಚು ಅಪಾಯಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

Sometimes the gap between life & death is a jump.

Lions & hyenas are the only animals who occasionally attack adult leopards with fatal blows. It avoids risk to injury or death fighting a hyena. pic.twitter.com/XstMxXdGV8

— Susanta Nanda IFS (@susantananda3) October 18, 2019

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ