ರಜನಿ ಜತೆ ಕೆಲಸ ಮಾಡುವೆ
Team Udayavani, Aug 2, 2018, 11:52 AM IST
ಮುಂಬಯಿ: ಮಕ್ಕಳ್ ನೀತಿ ಮಯ್ಯಂ ಸಂಸ್ಥಾಪಕ ಕಮಲ್ ಹಾಸನ್ ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಜತೆಗೆ ರಾಜಕೀಯ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಸಾಧ್ಯತೆ ತಳ್ಳಿ ಹಾಕಿಲ್ಲ. ಹಲವು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಇಬ್ಬರೂ ಭೇಟಿಯಾಗಿ ಅದರ ಬಗ್ಗೆ ಚರ್ಚೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ. ಜತೆಗೆ ಶೀಘ್ರದಲ್ಲೇ ಚರ್ಚಿಸಿ ನಿರ್ಧಾರ ಬಹಿರಂಗ ಮಾಡುತ್ತೇವೆ. ತಮಿಳುನಾಡಿನಲ್ಲಿ ಪಕ್ಷವನ್ನು ಬಲಪಡಿಸುತ್ತೇವೆ. ಚುನಾವಣೆಯಲ್ಲಿಯೂ ಸ್ಪರ್ಧಿಸುತ್ತೇವೆ ಎಂದಿದ್ದಾರೆ. ಬಿಜೆಪಿ ಜತೆಗೆ ಸೇರುವ ಮತ್ತು ಅದಕ್ಕೆ ಬೆಂಬಲಿಸುವ ವರದಿಗಳನ್ನು ಕಮಲ್ ಪ್ರಶ್ನಿಸಿದ್ದಾರೆ.