ಎಲ್ಐಸಿ ಆದಾಯದಲ್ಲಿ ಶೇ. 6ರಷ್ಟು ಏರಿಕೆ
Team Udayavani, Jun 30, 2022, 8:23 PM IST
ಮುಂಬೈ: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ), ಇದೇ ವರ್ಷ ಮಾ. 31ಕ್ಕೆ ಮುಕ್ತಾಯಗೊಂಡ 2021-22ನೇ ಆರ್ಥಿಕ ವರ್ಷದಲ್ಲಿ 4,27419 ಕೋಟಿ ರೂ. ಆದಾಯವನ್ನು ಗಳಿಸಿದೆ. 2021ರ ಮಾ. 31ಕ್ಕೆ ಮುಕ್ತಾಯವಾಗಿದ್ದ 2020-21ರಲ್ಲಿ ನಿಗಮದ ಆದಾಯ 4,02,844 ಕೋಟಿ ರೂ.ಗಳಷ್ಟಿತ್ತು. ಅದಕ್ಕೆ ಹೋಲಿಸಿದರೆ, 2021-22ರಲ್ಲಿ ನಿಗಮದ ಆದಾಯ ಶೇ. 6.1ರಷ್ಟು ಹೆಚ್ಚಾಗಿದೆ ಎಂದು ಈ ಕುರಿತಂತೆ ಹೊರಡಿಸಲಾದ ಪ್ರಕಟಣೆಯಲ್ಲಿ ಎಲ್ಐಸಿ ತಿಳಿಸಿದೆ.
2021-22ರಲ್ಲಿ ಬಂದಿರುವ ಆದಾಯದಲ್ಲಿ ತೆರಿಗೆ ಪಾವತಿಸಿದ ನಂತರದ ಲಾಭಾಂಶ (ಪಿ.ಎ.ಟಿ) 4,043.12 ಕೋಟಿ ರೂ.ಗಳಷ್ಟಾಗಿದೆ. 2020-21ರಲ್ಲಿ ಈ ಲಾಭಾಂಶ 2,900.57 ಕೋಟಿ ರೂ.ಗಳಷ್ಟಿತ್ತು. ಅಲ್ಲಿಗೆ, ಕಂಪನಿಯ ಪಿ.ಎ.ಟಿ. ಶೇ. 39.39ರಷ್ಟು ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.
2021-22ರಲ್ಲಿ ಬಂದಿರುವ ಪಿ.ಎ.ಟಿ. ಲಾಭದ ಆಧಾರದಲ್ಲಿ ಪ್ರತಿ ಷೇರಿನ ಮೇಲೆ 1.50 ರೂ.ಗಳಷ್ಟು ಡಿವಿಡೆಂಡ್ ನೀಡಲು ಎಲ್ಐಸಿ ನಿಗಮದ ನಿರ್ದೇಶಕರ ಮಂಡಳಿ ತೀರ್ಮಾನಿಸಿದೆ.
ಅದರಂತೆ, ಲಾಭಾಂಶದ ಶೇ. 23.46ರಷ್ಟು ಮೊತ್ತ, ಅಂದರೆ, 948.75 ಕೋಟಿ ರೂ.ಗಳಷ್ಟನ್ನು ಡಿವಿಡೆಂಡ್ ಪೇಔಟ್ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ ಎಂದು ಎಲ್ಐಸಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ