ಮುಂದಿನ ವರ್ಷದಿಂದ ಜೀವವಿಮೆ ಪಾಲಿಸಿಗಳಲ್ಲಿ ಬದಲಾವಣೆ

2020 ಫೆ.1ರಿಂದ ಅನ್ವಯ; ಬದಲಾವಣೆಗಳು ಏನೇನು?

Team Udayavani, Dec 14, 2019, 7:23 PM IST

ಜೀವವಿಮೆ ಪಾಲಿಸಿಗಳಲ್ಲಿ ಪ್ರಮುಖ ಬದಲಾವಣೆಗೆ ಅಖೀಲ ಭಾರತ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಉದ್ದೇಶಿದ್ದು 2020 ಫೆ.1ರಿಂದ ಜಾರಿಗೆ ಬರಲಿದೆ. ಈ ಬದಲಾವಣೆಗಳು ಹೀಗಿವೆ.

1. ಒಂದು ವೇಳೆ ಯುನಿಟ್‌ ಲಿಂಕ್‌ ಆದ ಪಾಲಿಸಿಗಳಾದರೆ ಅವುಗಳ ಪುನರುಜ್ಜೀವಿತ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ. ಯುನಿಟ್‌ ಲಿಂಕೇತರ ಪಾಲಿಸಿಗಳಾದರೆ ಅವುಗಳ ಪುನರುಜ್ಜೀವಿತ ಅವಧಿಯನ್ನು ಐದು ವರ್ಷಗಳ ವರೆಗೆ ವಿಸ್ತರಿಸಲಾಗುತ್ತದೆ. ಈ ಮೊದಲು ಇದು ಎರಡು ವರ್ಷಗಳಾಗಿತ್ತು. ಪುನರುಜ್ಜೀವಿತ ಅವಧಿ ಎಂದರೆ, ಮೊದಲ ಬಾರಿಗೆ ಪಾಲಿಸಿದಾರನು ಕಟ್ಟದೇ ಇರುವ ಪ್ರೀಮಿಯಂ ದಿನಾಂಕದಿಂದ ಮತ್ತೆ ಆತ ಸ್ಥಗಿತಗೊಂಡ ಪಾಲಿಸಿಯನ್ನು ಚಾಲನೆಗೊಳಿಸಲು ಮುಂದಾದ ಅವಧಿಯಾಗಿದೆ.

2. ಫೆಬ್ರವರಿಯಿಂದ ನಿವೃತ್ತಿ ಪ್ಲ್ರಾನ್‌ಗಳ ವಿತ್‌ಡ್ರಾವಲ್‌ ಮಿತಿ ಏರಿಕೆಯಾಗಲಿದೆ. ಗರಿಷ್ಠ ವಿತ್‌ಡ್ರಾವಲ್‌ ಮಿತಿಯು ಈಗಿರುವ ಮೂರನೇ ಒಂದು ಭಾಗದ ಬದಲಾಗಿ ಮೆಚೂÂರಿಟಿಯ ಶೇ.60ರಷ್ಟು ಆಗಲಿದೆ. ಆದರೆ ನಿವೃತ್ತಿ ಪ್ಲ್ರಾನ್‌ಗಳಲ್ಲಿ ಮೂರನೇ ಒಂದು ಭಾಗದಷ್ಟಕ್ಕೆ ಮಾತ್ರ ತೆರಿಗೆ ವಿನಾಯಿತಿ ಇರಲಿದ್ದು, ಎಲ್ಲ ಶೇ.60ರಷ್ಟಕ್ಕೆ ತೆರಿಗೆ ವಿನಾಯಿತಿ ಇರುವುದಿಲ್ಲ.

3. ಪಾಲಿಸಿಗಳ ಮೇಲಿನ ಐದು ವರ್ಷಗಳ ಲಾಕ್‌ ಅವಧಿ ಮುಗಿದ ಬಳಿಕ ಶೇ.25ರಷ್ಟು ವಿತ್‌ಡ್ರಾವಲ್‌ಗೆ ಅನುಮತಿ ನೀಡುವ ಬಗ್ಗೆಯೂ ಐಆರ್‌ಡಿಎಐ ಆಲೋಚನೆ ನಡೆಸುತ್ತಿದೆ. ಭಾಗಶಃ ವಿತ್‌ಡ್ರಾವಲ್‌ ಅನ್ನು ಉನ್ನತ ವ್ಯಾಸಂಗಕ್ಕಾಗಿ, ಮಕ್ಕಳ ವಿವಾಹ, ಗಂಭೀರ ಕಾಯಿಲೆಗಳು, ಆಸ್ತಿ ನಿವೇಶನ ಖರೀದಿ ಅಥವಾ ಮನೆಕಟ್ಟುವ ಉದ್ದೇಶಕ್ಕೆ ನೀಡಲು ಯೋಜಿಸಲಾಗುತ್ತಿದೆ.

4. 45 ವರ್ಷಕ್ಕಿಂತ ಕಡಿಮೆಯಿದ್ದ ಪಕ್ಷದಲ್ಲಿ ಯುನಿಟ್‌ ಲಿಂಕ್‌ ಪಾಲಿಸಿಗಳಲ್ಲಿ ಕನಿಷ್ಠ ಜೀವವಿಮೆ ಈಗಿರುವ 10 ಪಟ್ಟಿಗಿಂತ 7 ಪಟ್ಟು ಆಗಲಿದೆ. ಇದು ಪಾಲಿಸಿದಾರ ನಿಧನವಾಗಿದ್ದಲ್ಲಿ ನೀಡುವ ಹಣವಾಗಿರುತ್ತದೆ.

5. ಯುನಿಟ್‌ ಲಿಂಕ್ಡ್ ಪಾಲಿಸಿಗಳಿಗಳಿದ್ದ ಕಡ್ಡಾಯ ಗ್ಯಾರೆಂಟಿಯು ಇನ್ನು ಐಚ್ಛಿಕವಾಗಲಿದೆ. ಇದು ಫೆ.1ರಿಂದ ಅನ್ವಯವಾಗಲಿದೆ. ಈ ಮೊದಲು ಐಆರ್‌ಡಿಎಐಯು ನಿವೃತ್ತಿ ಯುನಿಟ್‌ ಲಿಂಕ್ಡ್ ಪಾಲಿಸಿಗಳಲ್ಲಿ ಗ್ಯಾರೆಂಟಿಯನ್ನು ಕಡ್ಡಾಯವನ್ನಾಗಿ ಮಾಡಿತ್ತು. ಈಗ ಹೊಸ ಕ್ರಮದಿಂದಾಗಿ ಪಾಲಿಸಿದಾರರಿಗೆ ರಿಲೀಫ್ ಸಿಕ್ಕಿದ್ದು ಗ್ಯಾರೆಂಟಿಯನ್ನು ಆಯ್ಕೆ ಮಾಡಬಹುದು ಅಥವಾ ಮಾಡದೇ ಇರಬಹುದಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ