ಆನ್‌ಲೈನ್‌ನಲ್ಲಿ ಜೀವಂತ!

Team Udayavani, Dec 25, 2018, 7:00 AM IST

ಗೋರಖ್‌ಪುರ: ರಾಖೀ ಶ್ರೀವಾತ್ಸವ ಎಂಬ ಮಹಿಳೆ ಮೃತಪಟ್ಟು 7 ತಿಂಗಳ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ಜೀವಂತವಾಗಿದ್ದಳು. ಪ್ರತಿದಿನ ಆನ್‌ಲೈನ್‌ನಲ್ಲಿದ್ದು, ಫೇಸ್‌ಬುಕ್‌, ಟ್ವಿಟರ್‌ ಅಪ್‌ಡೇಟ್‌ ಮಾಡುತ್ತಾ, ತಾನು ಇಹಲೋಕ ತ್ಯಜಿ ಸಿರುವ ವಿಷಯ ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದಳು!

ಅರೆ, ಯಾವುದೋ ಹಾರರ್‌ ಸಿನಿಮಾದ ಕಥೆ ಹೇಳುತ್ತಿದ್ದೀರಾ ಎಂದು ಕೇಳಬೇಡಿ. ಇದು ಕಥೆಯಲ್ಲ. ಉತ್ತರ ಪ್ರದೇಶದ ಗೋರಖ್‌ ಪುರ ದಲ್ಲಿ ನಡೆದ ಸತ್ಯ ಕಥೆ!

ಆದರೆ ಇಲ್ಲಿ ಸತ್ತವಳನ್ನು 7 ತಿಂಗಳ ಕಾಲ ಜಾಲತಾಣಗಳಲ್ಲಿ ಜೀವಂತವಾಗಿ ಇರಿಸಿದ್ದು ಆಕೆಯ ಪತಿ, ಖ್ಯಾತ ಸರ್ಜನ್‌ ಡಾ. ಧಮೇಂದ್ರ ಪ್ರತಾಪ್‌ ಸಿಂಗ್‌. ಆತನನ್ನು ಮತ್ತು ಕೊಲೆಗೆ ಸಹಕರಿ ಸಿದ ಆತನ ಇಬ್ಬರು ಸಹಾಯಕರನ್ನು ಪೊಲೀ ಸರು ಈಗ ಬಂಧಿಸಿದ್ದಾರೆ. 

ಆಗಿದ್ದೇನು?: ರಾಖೀ ಧರ್ಮೇಂದ್ರನನ್ನು ಮದುವೆಯಾಗುವಾಗಲೇ ಆತನಿಗೆ ಮದುವೆಯಾಗಿತ್ತು. ಈ ವಿಚಾರ ಮೊದಲ ಪತ್ನಿಗೆ ತಿಳಿದು ಆತನನ್ನು ರಾಖೀಯಿಂದ ದೂರ ಮಾಡಲು ಪ್ರಯತ್ನಿಸಿದ್ದರು. ಅದೇ ವೇಳೆ ರಾಖೀಗೂ ವಿಷಯ ತಿಳಿದು ಅವರು ಧರ್ಮೇಂದ್ರ ನಿಂದ ದೂರಾಗಿ ಮನೀಶ್‌ನನ್ನು ಮದುವೆ ಯಾಗಿದ್ದಳು. ಬಳಿಕವೂ ಆಕೆ ಧರ್ಮೇಂದ್ರ ಜೊತೆ ಸಂಪರ್ಕ ದಲ್ಲಿದ್ದಳು ಎಂದು ಪೊಲೀಸರು ಹೇಳಿದ್ದಾರೆ. 

ಒಂದು ಬಾರಿ ಪತಿ ಮನೀಶ್‌ ಜತೆ ನೇಪಾಳಕ್ಕೆ ತೆರಳಿದ ರಾಖೀ, ಕೆಲ ದಿನಗಳ ಬಳಿಕ ಪತಿಯನ್ನು ವಾಪಸ್‌ ಕಳುಹಿಸಿ, ಧರ್ಮೇಂದ್ರನನ್ನು ಭೇಟಿ ಯಾಗುವ ಸಲು ವಾಗಿ ಆಕೆ ಅಲ್ಲೇ ಉಳಿದಿದ್ದಳು. ಧರ್ಮೇಂದ್ರ ನೇಪಾಳದಲ್ಲಿ ರಾಖೀ ಯನ್ನು ಕಮರಿ   ಯೊಂದಕ್ಕೆ ತಳ್ಳಿ ಕೊಲೆ ಮಾಡಿದ್ದ. ಬಳಿಕ ಆಕೆಯ ಮೊಬೈಲ್‌ ಮೂಲಕ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಮಾಡುತ್ತಿದ್ದ. ಜೂನ್‌ನಲ್ಲಿ ರಾಖೀ ಕುಟುಂಬ ಆಕೆ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ವಿಚಾರ ಬೆಳಕಿಗೆ ಬಂತು.


ಈ ವಿಭಾಗದಿಂದ ಇನ್ನಷ್ಟು

 • ಹೊಸದಿಲ್ಲಿ: ಯುದ್ಧ ಸನ್ನಿವೇಶದಲ್ಲೂ ಸಮರ ವಿಮಾನ ನಡೆಸುವ ಸಾಮರ್ಥ್ಯ ಹೊಂದಿದ ಪ್ರಥಮ ಮಹಿಳಾ ಪೈಲಟ್‌ ಆಗಿ ಫ್ಲೈಟ್‌ ಲೆಫ್ಟಿನೆಂಟ್‌ ಭಾವನಾ ಕಾಂತ್‌ ಬುಧವಾರ ಇತಿಹಾಸ...

 • ಲೋಕಸಭೆ ಚುನಾವಣ ಫ‌ಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು ಘಟಾನುಘಟಿಗಳ ಭವಿಷ್ಯವೂ ಸಂಜೆಯೊಳಗೆ ನಿರ್ಧಾರವಾಗಲಿದೆ. ಈ ಚುನಾವಣೆ ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ...

 • ಹೊಸದಿಲ್ಲಿ: ಗುಜರಾತ್‌ನಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪಿಡುಗನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಲ್ಲಿನ ಸರಕಾರ ಕೈಗೊಂಡಿದ್ದ "2018ರ ಗುಜರಾತ್‌ ಕ್ರಿಮಿನಲ್‌...

 • ಡೆಹ್ರಾಡೂನ್‌: ಪ್ರಧಾನಿ ನರೇಂದ್ರ ಮೋದಿ ಧ್ಯಾನಗೈದ ಕೇದಾರನಾಥದ ಧ್ಯಾನ ಕುಟೀರ ಈಗ ಮೋದಿ ಗುಹೆ ಎಂದೇ ಖ್ಯಾತಿ ಪಡೆದಿದೆ. ಈ ಗುಹೆ ಈಗ ಜನಪ್ರಿಯ ಅಧ್ಯಾತ್ಮ ಪ್ರವಾಸ...

 • ಜಮ್ಮು/ಬಾಗಲಕೋಟೆ: ಕಾಶ್ಮೀರದ ಪೂಂಛ್ ಜಿಲ್ಲೆ ಬಳಿ ಗಡಿಯಲ್ಲಿ ತರಬೇತಿ ಪ್ರಕ್ರಿಯೆ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದ ಪರಿಣಾಮ ಕರ್ನಾಟಕದ ಬಾಗಲಕೋಟೆ ಮೂಲದ ಯೋಧ...

ಹೊಸ ಸೇರ್ಪಡೆ

 • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

 • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

 • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

 • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

 • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

 • ಕುಂದಾಪುರ: ಮಳೆ ನೀರಿಂಗಿಸುವ ಮೂಲಕ ನೀರನ್ನು ಕಾದಿಟ್ಟು ಕೊಳ್ಳಿ. ಪ್ರತಿಯೊಬ್ಬರೂ ನೀರುಳಿ ಸುವ ನಿಟ್ಟಿನಲ್ಲಿ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ. ನೀರು ಎಂದರೆ...