ಲೋಕಸಮರ; ಪಶ್ಚಿಮಬಂಗಾಳದಲ್ಲಿ ಟಿಎಂಸಿ, ಬಿಜೆಪಿ ಘರ್ಷಣೆ; ಮತಗಟ್ಟೆ, EVM ಧ್ವಂಸ

Team Udayavani, Apr 18, 2019, 12:24 PM IST

ನವದೆಹಲಿ: ದೇಶದ 11 ರಾಜ್ಯಗಳ 95 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಬೆಳಗ್ಗೆ 7ಗಂಟೆಯಿಂದ ಮತದಾನ ನಡೆಯುತ್ತಿದ್ದು, 11ಗಂಟೆವರೆಗೆ ಒಟ್ಟು ಶೇ.12.69ರಷ್ಟು ಮತದಾನವಾಗಿದೆ. ಏತನ್ಮಧ್ಯೆ ಪಶ್ಚಿಮಬಂಗಾಳದ ರಾಯ್ ಗಂಜ್ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಮತಗಟ್ಟೆ ಹಾಗೂ ಇವಿಎಂ ಅನ್ನು ಪುಡಿಗೈಯಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಇವಿಎಂ ಧ್ವಂಸಗೊಳಿಸಿದ್ದರಿಂದ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಅರೆಸೇನಾ ಪಡೆ, ಪೊಲೀಸರು ಆಗಮಿಸಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿದ್ದಾರೆ ಎಂದು ವರದಿ ಹೇಳಿದೆ.

ಏತನ್ಮಧ್ಯೆ ಒಡಿಶಾದಲ್ಲಿ ಮತಚಲಾಯಿಸಲು ನಿಂತಿದ್ದ 95ವರ್ಷದ ಅಜ್ಜಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಲ್ಲದೇ ಪಶ್ಚಿಮಬಂಗಾಳದ ರಾಷ್ಟ್ರೀಯ ಹೆದ್ದಾರಿ 34ರಲ್ಲಿ ಬೈಕ್ ಅಡ್ಡ ಇಟ್ಟು ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿ ಜೊತೆ ಸ್ಥಳೀಯರು ಘರ್ಷಣೆಗೆ ಇಳಿದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ