ಕೊನೇ ಹಂತದ ಮತದಾನ ; ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ದಾಳಿ

ದಿಗ್ಗಜರಿಂದ ಹಕ್ಕು ಚಲಾವಣೆ ,ಬಿಜೆಪಿ- ಎಸ್‌ಪಿ ಕಾರ್ಯಕರ್ತರ ಘರ್ಷಣೆ

Team Udayavani, May 19, 2019, 9:42 AM IST

ಹೊಸದಿಲ್ಲಿ : ಲೊಎಕಸಭಾ ಚುನಾವಣೆ ಭಾನುವಾರ ಮುಕ್ತಾಯ ಹಂತ ತಲುಪಿದ್ದು, 7 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 59 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಎಲ್ಲೆಡೆ ಭದ್ರತೆಯ ನಡುವೆ  ಮತದಾನ ನಡೆಯುತ್ತಿದೆ.

ಉತ್ತರಪ್ರದೇಶದ ಮೋಘಲ್‌ಸೆರೈ ನಲ್ಲಿ ಎಸ್‌ಪಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಪಶ್ಚಿಮ ಬಂಗಾಳದ ಲ್ಲಿ ಬಿಜೆಪಿ ಅಭ್ಯರ್ಥಿ ಅನುಪಮ್‌ ಹಜ್ರಾ ಅವರ ಮೇಲೆ ದಾಳಿ ನಡೆಸಲಾಗಿದೆ. ಟಿಎಂಸಿ ಕಾರ್ಯಕರ್ತರು ಹಜ್ರಾ ಅವರ ಕಾರಿನ ಗಾಜುಗಳನ್ನು ಜಖಂಗೊಳಿಸಿದ್ದಾರೆ.

ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವ ವಾರಾಣಸಿಯಲ್ಲೂ ಬಿರುಸಿನ ಮತದಾನ ನಡೆಯುತ್ತಿದೆ.

ಉತ್ತರ ಪ್ರದೇಶ ಮತ್ತು ಪಂಜಾಬ್‌ಗಳ ತಲಾ 13 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್‌ ಅವರು ಗೋರಖ್‌ಪುರ್‌ನಲ್ಲಿ ಹಕ್ಕು ಚಲಾಯಿಸಿದರು. ಬೃಹತ್‌ ಮತದಾನ ಪ್ರಕ್ರಿಯೆಯ ಭಾಗವಾಗಲು ಸಂತಸವಾಗುತ್ತಿದೆ ಎಂದರು.

ಪಶ್ಚಿಮ ಬಂಗಾಲದ 9,ಮಧ್ಯಪ್ರದೇಶ ಮತ್ತು ಬಿಹಾರಗಳ ತಲಾ 8, ಹಿಮಾಚಲ ಪ್ರದೇಶದ 4, ಝಾರ್ಖಂಡ್‌ ನ 3, ಚಂಡೀಗಢದ 1 ಕ್ಷೇತ್ರದಲ್ಲೂ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮೇ 23ರಂದು ಫ‌ಲಿತಾಂಶ ಪ್ರಕಟವಾಗಲಿದೆ.

ಬಿಹಾರ ಸಿಎಂ ನಿತೀಶ್‌ ಕುಮಾರ್‌ ಪಾಟ್ನಾದ ರಾಜ್‌ಭವನ್‌ನಲ್ಲಿ ಹಕ್ಕು ಚಲಾಯಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ