ಅಪ್ಪನಂತೆ ಮಗ! ಅಜಂ ಖಾನ್ ಪುತ್ರನ ವಿರುದ್ಧ ಜಯಪ್ರದಾ ಆಕ್ರೋಶ

Team Udayavani, Apr 22, 2019, 3:28 PM IST

ಲಕ್ನೋ: ತನ್ನನ್ನು “ಅನಾರ್ಕಲಿ” ಎಂದು ಕರೆದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪುತ್ರ ಅಬ್ದುಲ್ಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಜನತಾ ಪಕ್ಷದ ನಾಯಕಿ, ನಟಿ ಜಯಪ್ರದಾ, ಅಪ್ಪನಂತೆ ಮಗ ಎಂದು ಸೋಮವಾರ ತಿರುಗೇಟು ನೀಡಿದ್ದಾರೆ.

ಎಎನ್ ಐ ಜೊತೆ ಮಾತನಾಡಿದ ಜಯಪ್ರದಾ, ಇದು ಸಹಜವಾದದ್ದು..ಯಾಕೆಂದರೆ ಅಪ್ಪ ಹೇಗೋ ಅದೇ ಭಾಷೆಯಲ್ಲಿ ಮಗ ಮಾತನಾಡುತ್ತಿದ್ದಾನೆ. ಅಪ್ಪನ ರೀತಿ ತಾನೂ ಹಾಗೇ ಆಗಬೇಕು ಎಂದು ಅಬ್ದುಲ್ಲಾ ಈ ರೀತಿ ಮಾಡುತ್ತಿದ್ದಾನೆ, ಆತನ ಹೇಳಿಕೆಯಿಂದ ನನಗೆ ನಿಜಕ್ಕೂ ಬೇಸರವಾಗಿದೆ. ಈ ಹುಡುಗ ನನ್ನ ಕಣ್ಮುಂದೆಯೇ ಬೆಳೆದವ. ಆತ ನನ್ನಲ್ಲಿ ಅನಾರ್ಕಲಿಯನ್ನು ಕಂಡಿದ್ದರೆ ಅದು ನಿಜಕ್ಕೂ ದುರದೃಷ್ಟ. ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಜಯಪ್ರದಾ ಹೇಳಿದರು.

ಆತನ ಹೇಳಿಕೆಯನ್ನು ಗಮನಿಸಿದರೆ ಅನಾರ್ಕಲಿ ಕೇವಲ ನಾನು ಮಾತ್ರವಲ್ಲ, ನನ್ನ ಎಣಿಕೆ ಪ್ರಕಾರ ಪ್ರತಿಯೊಬ್ಬ ಮಹಿಳೆಯೂ ಅನಾರ್ಕಲಿ ಎಂಬಂತಿದೆ ಎಂದು ಜಯಪ್ರದಾ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗಷ್ಟೇ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ಅಜಂ ಖಾನ್, ಬಿಜೆಪಿ ನಾಯಕಿ ಜಯಪ್ರದಾ ಅವರು ಖಾಕಿ ಒಳಉಡುಪು ಧರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ