Udayavni Special

ಕಾಂಗ್ರೆಸ್‌ ಪಾಳಯದಲ್ಲೀಗ ಅಸಹನೀಯ ಮೌನ “ರಾಗಾ’!


Team Udayavani, May 24, 2019, 6:00 AM IST

q-43

ನವದೆಹಲಿ: ಸತತ ಎರಡು ತಿಂಗಳ ಚುನಾವಣೆ ಪ್ರಚಾರ ರ್ಯಾಲಿಗಳಲ್ಲಿ “ಚೌಕಿದಾರ್‌ ಚೋರ್‌ ಹೈ’ ಎಂದು ಅಬ್ಬರಿಸಿದ ಕಾಂಗ್ರೆಸ್‌ ಪಾಳಯದಲ್ಲೀಗ ಮೌನರಾಗ! ದೇಶದೆಲ್ಲೆಡೆ ಉತ್ತಮ ಫ‌ಲಿತಾಂಶದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ ಮುಖಂಡರ ನಿರೀಕ್ಷೆಗಳೆಲ್ಲಾ ಹುಸಿಯಾಗಿದ್ದು, ಕಾಂಗ್ರೆಸ್‌ನ ಅದರಲ್ಲೂ ಗಾಂಧಿ ಕುಟುಂಬದ ಭದ್ರ ಕೋಟೆಯೇ ಆಗಿದ್ದ ಅಮೇಥಿಯಲ್ಲಿ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯೇ ಸೋಲನು ಭವಿಸಿರುವುದು ಪಕ್ಷಕ್ಕಾದ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
2009ರ ಚುನಾವಣೆ ನಂತರ ಸತತ ಎರಡು ದೊಡ್ಡ ಮಟ್ಟದ ಸೋಲುಂಡು ಕಂಗೆಟ್ಟಿರುವ ಕೈ ಮುಖಂಡರು ಈಗ ಆತ್ಮಾವಲೋಕನಕ್ಕೆ ನಿಂತಿದ್ದಾರೆ.

ಇತ್ತ, ಬೆಳಗ್ಗೆ 11 ಗಂಟೆ ಸುಮಾರಿಗೆ ಎನ್‌ಡಿಎ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ದೆಹಲಿಯಲ್ಲಿನ ರಾಹುಲ್‌ ಗಾಂಧಿ ನಿವಾಸಕ್ಕೆ ತೆರಳಿದ ಸಹೋದರಿ ಪ್ರಿಯಾಂಕ ವಾದ್ರಾ, ಸಹೋದರನೊಂದಿಗೆ ಕೆಲ ಕಾಲ ಚರ್ಚಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ರಾಹುಲ್‌ ಹಾಗೂ ಪ್ರಿಯಾಂಕ, ಪಕ್ಷದ ದಯನೀಯ ಸೋಲಿನ ಕುರಿತು ಅರ್ಧ ಗಂಟೆಗೂ ಹೆಚ್ಚು ಸಮಯ ಚರ್ಚಿಸಿದರು ಎನ್ನಲಾಗಿದೆ.

ಮೂಲಗಳ ಪ್ರಕಾರ ಕಾಂಗ್ರೆಸ್‌ ಇಷ್ಟೊಂದು ಹೀನಾಯ ಸೋಲನ್ನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ತನ್ನ ಆಡಳಿತವಿರುವ ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಾದರೂ ಪಕ್ಷ ಉತ್ತಮ ಸಾಧನೆ ತೋರಬಹುದು ಎಂಬ ಗಾಂಧಿ ಕುಟುಂ ಬದ ನಿರೀಕ್ಷೆ ಕೂಡ ಹುಸಿಯಾಗಿದೆ.

ಈ ನಡುವೆ ದೇಶದೆಲ್ಲೆಡೆ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗುತ್ತಿರುವಂತೆ ದೆಹಲಿಯಲ್ಲಿನ ಎಐಸಿಸಿ ಕಚೇರಿ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳ ಕಾಂಗ್ರೆಸ್‌ ಕಚೇರಿಗಳಲ್ಲಿ ಮೌನ ಆವರಿಸಿತ್ತು. ಒಂದೆಡೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದ್ದರೆ, ಕಾಂಗ್ರೆಸಿಗರು ಮೌನರಾಗದ ಮೊರೆ ಹೋಗಿದ್ದರು.

ಡಿಸೆಂಬರ್‌ ಸಂಭ್ರಮ ಮಾಯ: 2018ರ ಡಿಸೆಂಬರ್‌ನಲ್ಲಿ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಫ‌ಲಿತಾಂಶವನ್ನೇ ಪಡೆದಿದ್ದ ಕಾಂಗ್ರೆಸ್‌, ಕೇವಲ ಐದು ತಿಂಗಳ ಅಂತರದಲ್ಲಿ ರಾಜಸ್ಥಾನ ಹಾಗೂ ಮಧ್ಯ ಪ್ರದೇಶಗಳಲ್ಲಿ ಹೀನಾಯ ಸೋಲನುಭವಿಸಿದೆ. ತೆಲಂಗಾಣದಲ್ಲಿ ಎನ್‌ಡಿಎ 5 ಸ್ಥಾನ ಗಳಿಸಿರುವುದೂ ಕಾಂಗ್ರೆಸ್‌ ಪಾಲಿಗೆ ನುಂಗಲಾರದ ತುತ್ತಾಗಿದೆ.

8 ಕ್ಷೇತ್ರಗಳ ಸೋಲಿನ ಹೊಣೆ
ಈ ನಡುವೆ ಉತ್ತರ ಪ್ರದೇಶದಲ್ಲಿ ಮಹಾಘಟಬಂಧನ್‌ 8 ಕ್ಷೇತ್ರಗಳಲ್ಲಿ ಸೋಲನುಭವಿಸಲು ಕಾಂಗ್ರೆಸ್‌ ಕಾರಣ ಎಂದು ಮಿತ್ರಪಕ್ಷಗಳು ನೇರ ಆರೋಪ ಮಾಡಿವೆ. ಬಿಜೆಪಿಯ ಮನೇಕಾ ಗಾಂಧಿ ಸ್ಪರ್ಧಿಸಿ ಗೆದ್ದಿರುವ ಸುಲ್ತಾನ್‌ಪುರ, ಬರಾಬಂಕಿ, ಬಿಜೂರ್‌, ಧರೂರಹಾ, ಕೈರಾಣ, ಶರಾವಸ್ತಿ ಮತ್ತು ಸೀತಾಪುರದಲ್ಲಿ ಘಟಬಂಧನ್‌ ಅಭ್ಯರ್ಥಿಗಳು ಸೋಲಲು ಕಾಂಗ್ರೆಸ್‌ ಕಾರಣ ಎನ್ನಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

nternet-slow-2

ನಿಮ್ಮ ಇಂಟರ್ನೆಟ್ ಸ್ಲೋನಾ..? ಹಾಗಾದ್ರೆ ಹೀಗೆ ಮಾಡಿ

ಗುಲ್ವಾಡಿ; ಬಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಗುಲ್ವಾಡಿ; ಭಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಮಲ್ಲಾರು : ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ ; ಹತ್ತು ಜಾನುವಾರುಗಳ ರಕ್ಷಣೆ

ಮಲ್ಲಾರು : ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ ; ಹತ್ತು ಜಾನುವಾರುಗಳ ರಕ್ಷಣೆ

ಕುರ್ಕಾಲು : ಗಿರಿನಗರದ ಒಂದೇ ಕುಟುಂಬದ ಐದು ಮಂದಿಯಲ್ಲಿ ಸೋಂಕು ದೃಢ‌ ; 12 ಮನೆ ಸೀಲ್‌ ಡೌನ್‌

ಕುರ್ಕಾಲು :ಗಿರಿನಗರದ ಒಂದೇ ಕುಟುಂಬದ ಐದು ಮಂದಿಯಲ್ಲಿ ಸೋಂಕು ದೃಢ‌ ; 12 ಮನೆ ಸೀಲ್‌ಡೌನ್‌

ನೂರ್ತಾಡಿ ಯುವಕರಿಂದ ಸಾಂಪ್ರಾದಾಯಿಕ ಪದ್ಧತಿ ಬೇಸಾಯ

ನೂರ್ತಾಡಿ ಯುವಕರಿಂದ ಸಾಂಪ್ರಾದಾಯಿಕ ಪದ್ಧತಿ ಬೇಸಾಯ

Vikram-Bathra-2

ಕಾರ್ಗಿಲ್ ನಲ್ಲಿ ವೈರಿಗಳನ್ನು ಮಣಿಸಿ ‘ಯೇ ದಿಲ್ ಮಾಂಗೇ ಮೋರ್’ ಎಂದಿದ್ದ ಬ್ರೇವ್ ಕ್ಯಾಪ್ಟನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2011

ಬೆಂಗಳೂರಿನಲ್ಲೊಂದು ಟೈ ರೋಮಾಂಚನ

rajani-kanth

ಮೋದಿಯೂ ವರ್ಚಸ್ವಿ ನಾಯಕ

smruthi-irani

ಬರಿಗಾಲಲ್ಲೇ ವಿನಾಯಕ ದೇಗುಲಕ್ಕೆ ತೆರಳಿದ್ದ ಸ್ಮತಿ!

Asshivrda

ಮಾಜಿ ರಾಷ್ಟ್ರಪತಿ ಪ್ರಣಬ್ ರ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

Lalu-head-scratch-700

ರಾಜೀನಾಮೆ ನೀಡುವ ರಾಹುಲ್‌ ನಿರ್ಧಾರ ಆತ್ಮಾಹುತಿಯದ್ದು : ಲಾಲು

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

nternet-slow-2

ನಿಮ್ಮ ಇಂಟರ್ನೆಟ್ ಸ್ಲೋನಾ..? ಹಾಗಾದ್ರೆ ಹೀಗೆ ಮಾಡಿ

ಗುಲ್ವಾಡಿ; ಬಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಗುಲ್ವಾಡಿ; ಭಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಮಲ್ಲಾರು : ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ ; ಹತ್ತು ಜಾನುವಾರುಗಳ ರಕ್ಷಣೆ

ಮಲ್ಲಾರು : ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ ; ಹತ್ತು ಜಾನುವಾರುಗಳ ರಕ್ಷಣೆ

ಗುಂಡ್ಮಿ; ಹೋಮ್ ಕ್ವಾರೆಂಟೈನ್‌ನಿಂದ ಬೇಸರಗೊಂಡು ಬಾಲಕ ಆತ್ಮಹತ್ಯೆ

ಗುಂಡ್ಮಿ; ಹೋಮ್ ಕ್ವಾರೆಂಟೈನ್‌ನಿಂದ ಬೇಸರಗೊಂಡು ಬಾಲಕ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.