ಪಾಸ್ ಪೋರ್ಟ್ ನಲ್ಲಿ ಕಮಲದ ಚಿಹ್ನೆ: ಕಾರಣ ನೀಡಿದ ವಿದೇಶಾಂಗ ಇಲಾಖೆ

Team Udayavani, Dec 13, 2019, 11:01 AM IST

ಹೊಸದಿಲ್ಲಿ: ಕೇಂದ್ರ ಸರಕಾರ ಹೊಸ ಪಾಸ್ ಪೋರ್ಟ್ ಗಳಲ್ಲಿ ಕಮಲದ ಚಿಹ್ನೆಯನ್ನು ಮುದ್ರಿಸುತ್ತಿದ್ದು, ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಇದೀಗ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದ್ದು, ಭದ್ರತಾ ಕಾರಣಗಳಿಂದ ಪಾಸ್ ಪೋರ್ಟ್ ಮೇಲೆ ಕಮಲದ ಚಿಹ್ನೆಯನ್ನು ಅಚ್ಚೊತ್ತಲಾಗುವುದು ಎಂದಿದೆ.

ನಕಲಿ ಪಾಸ್ ಪೋರ್ಟ್ ಗಳನ್ನು ಪತ್ತೆ ಹಚ್ಚಿಸುವ ಸಲುವಾಗಿ ಈ ರಾಷ್ಟ್ರೀಯ ಪುಷ್ಪವಾದ ಕಮಲದ ಚಿಹ್ನೆಯನ್ನು ಬಳಸಲಾಗುತ್ತಿದೆ. ಮುಂದೆ ಇತರ ರಾಷ್ಟ್ರೀಯ ಚಿಹ್ನೆಗಳನ್ನೂ ಸರದಿಯಲ್ಲಿ ಬಳಸಲಾಗುವುದು ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

ಕೇಂದ್ರ ಸರಕಾರದ ಈ ನಡೆಯನ್ನು ವಿರೋಧಿಸಿ ಕೇರಳದ ಕಾಂಗ್ರೆಸ್ ನಾಯಕ ಎಂ ಕೆ ರಾಘವನ್ ಲೋಕಸಭೆಯಲ್ಲಿ ಪ್ರಶ್ನಿಸಿದ್ದರು. ಸರಕಾರ ಎಲ್ಲವನ್ನೂ ಕೇಸರೀಕರಣಗೊಳಿಸುತ್ತಿದೆ, ಇಂತಹ ಪಾಸ್ ಪೋರ್ಟ್ ಗಳನ್ನು ಸರಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ