ಬಾಂಡ್ ಸಿನಿಮಾದಂತೆ ಸೇನೆ ಕೆಲಸ ಮಾಡಲ್ಲ
Team Udayavani, Dec 22, 2019, 6:30 AM IST
ಪುಣೆ: ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಇರುವಂತೆ ಅಂದದ ಹುಡುಗಿಯರು, ಗಿಟಾರ್, ಗನ್ ಮತ್ತು ಗ್ಲಾಮರ್ ಮುಂತಾದವುಗಳು ಸೇನೆಯ ಗುಪ್ತಚರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಇರುವುದಿಲ್ಲ ಎಂದು ಭೂಸೇನೆಯ ನಿಯೋಜಿತ ಮುಖ್ಯಸ್ಥ ಲೆ.ಜ.ಮನೋಜ್ ನರವಾನೆ ಹೇಳಿದ್ದಾರೆ.
ಪುಣೆಯಲ್ಲಿ ಪತ್ರಕರ್ತ ನಿತಿನ್ ಗೋಖಲೆ ಬರೆದ “ಆರ್.ಎನ್.ಕವೋ: ಜಂಟಲ್ಮ್ಯಾನ್ ಸ್ಪೈಮಾಸ್ಟರ್’ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಕವೋ ಅವರು ದೇಶದ ಪ್ರಮುಖ ಗುಪ್ತಚರ ಸಂಸ್ಥೆ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ನ ಮೊದಲ ಮುಖ್ಯಸ್ಥರಾಗಿದ್ದರು. “ರಾ’ ಬೆಂಬಲ ಮತ್ತು ಗುಪ್ತಚರ ಮಾಹಿತಿ ಇಲ್ಲದೆ ಸೇನೆಯ ಯಾವುದೇ ಕಾರ್ಯಾಚರಣೆ ಯಶಸ್ವಿಯಾಗುತ್ತಿರಲಿಲ್ಲ ಎಂದು ಹೆಮ್ಮೆಯಿಂದ ಹೇಳುವುದಾಗಿ ನರವಾನೆ ಹೇಳಿದ್ದಾರೆ. ಸೇನೆ ಮತ್ತು ದೇಶದ ರಕ್ಷಣೆಗಾಗಿರುವ ವ್ಯವಸ್ಥೆಯಲ್ಲಿನ ಗುಪ್ತಚರ ವ್ಯವಸ್ಥೆ ಎಂದರೆ ಜೇಮ್ಸ್ಬಾಂಡ್ ಸಿನಿಮಾಗಳಲ್ಲಿರುವಂತೆ ಗ್ಲಾಮರ್, ಗಿಟಾರ್, ಗನ್ ಇರುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್