ಉಗ್ರರ ಅಡಗುದಾಣಕ್ಕೆ ಲಗ್ಗೆ: ಭಾರೀ ಪ್ರಮಾಣದ ಸ್ಫೋಟಕ ವಶ

Team Udayavani, Nov 4, 2019, 1:13 AM IST

ಜಮ್ಮು/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಕಿಶಾ¤Ìರ್‌ ಜಿಲ್ಲೆಯಲ್ಲಿ ರವಿವಾರ ಉಗ್ರರ ಅಡಗುತಾಣವೊಂದನ್ನು ಭದ್ರತಾ ಪಡೆ ಬೇಧಿಸಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ.

ಕಾರ್ಯಾಚರಣೆ ವೇಳೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ರೈಫ‌ಲ್ಸ್‌, ಸ್ಥಳೀಯ ಪೊಲೀ ಸರ ವಿಶೇಷ ಕಾರ್ಯಾಚರಣೆ ಪಡೆ ಇಲ್ಲಿನ ಶೆರಿ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯ ನಡೆಸಿದೆ. ಈ ವೇಳೆ, ಚೈನೀಸ್‌ ಪಿಸ್ತೂಲ್‌, 2 ಮ್ಯಾಗಜಿನ್‌ಗಳು, 27 ಸುತ್ತುಗಳಿರುವ ಒಂದು ಎಕೆ ಮ್ಯಾಗಜಿನ್‌, 8.1 ಕೆಜಿ ಸ್ಫೋಟಕಗಳು, 10 ಎಲೆಕ್ಟ್ರಾನಿಕ್‌ ಡಿಟೋನೇ ಟರ್‌ಗಳು, ಸುಧಾ ರಿತ ಸ್ಫೋಟಕಕ್ಕೆ ಬಳಸು ವಂಥ ಬ್ಯಾಟರಿ ಇರುವ 5 ಸ್ವಿಚ್‌ಗಳನ್ನು ವಶಪಡಿಸಿ ಲಾಯಿತು ಎಂದು ಅಧಿಕಾ ರಿಗಳು ಹೇಳಿದ್ದಾರೆ.

ಏಕಾಂಗಿಯಾಗಿಸಲು ಕರೆ: ಭಯೋ ತ್ಪಾದನೆ ಎನ್ನುವುದು ಜಾಗತಿಕ ಸಮಸ್ಯೆಯಾಗಿದ್ದು, ಯಾವ್ಯಾವ ದೇಶಗಳು ಅದನ್ನು ತಮ್ಮ ಸರಕಾರದ ನೀತಿಗಳಾಗಿಸಿವೆಯೋ ಅಂಥ ದೇಶಗಳನ್ನು ಏಕಾಂಗಿಯಾಗಿಸಬೇಕಾದ ಅಗತ್ಯವಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ತಾಷೆRಂಟ್‌ನಲ್ಲಿ ರವಿವಾರ ಭಾರತ-ಉಜ್ಬೇಕಿಸ್ಥಾನ ಜಂಟಿ ಕವಾಯತು “ದಸ್ತ್ಲಿಕ್‌ 2019’ರಲ್ಲಿ ಅವರು ಮಾತನಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ