ಗುಂಪು ಹಲ್ಲೆಗೆ ಜೀವಾವಧಿ ಶಿಕ್ಷೆ : ಉ.ಪ್ರ. ಸರಕಾರಕ್ಕೆ ಕರಡು ಮಸೂದೆ ಸಲ್ಲಿಕೆ

Team Udayavani, Jul 11, 2019, 4:23 PM IST

ಲಕ್ನೋ : ಗೋ ರಕ್ಷಕರು ಸೇರಿದಂತೆ ವಿವಿಧ ಬಗೆಯ ಆಕ್ರೋಷಿತ ಗುಂಪುಗಳು ನಡೆಸುವ ಅನೇಕ ರೀತಿಯ ಸಮೂಹ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಕಾನೂನು ಆಯೋಗ, ಜೀವಾವಧಿ ಶಿಕ್ಷೆಯ ಶಿಫಾರಸಿನೊಂದಿಗೆ ಕರಡು ಮಸೂದೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.

ಉತ್ತರ ಪ್ರದೇಶ ಕಾನೂನು ಆಯೋಗದ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಾಧೀಶ ಎ ಎನ್‌ ಮಿತ್ತಲ್‌ ಅವರಿಂದ ಗುಂಪು ಹಲ್ಲೆ ಕುರಿತ ವರದಿ ಮತ್ತು ಅದನ್ನು ಉಗ್ರವಾಗಿ ನಿಗ್ರಹಿಸುವ ಕರಡು ಮಸೂದೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಸಲ್ಲಿಸಿದರು.

128 ಪುಟಗಳ ವರದಿಯಲ್ಲಿ ಅಧ್ಯಕ್ಷ ಮಿತ್ತಲ್‌ ಅವರು ಸಮೂಹ ಹಲ್ಲೆಯ ಹಲವಾರು ಪ್ರಕರಣಗಳನ್ನು ಉಲ್ಲೇಖೀಸಿದ್ದು ಇವುಗಳನ್ನು ತಡೆಯುವ ನಿಟ್ಟಿನಲ್ಲಿ 2018ರಲ್ಲಿ ಸುಪ್ರೀಂ ಕೋರ್ಟ್‌, ಮಾಡಿದ್ದ ಶಿಫಾರಸುಗಳ ಪ್ರಕಾರ ಕೂಡಲೇ ಪ್ರಬಲ ಕಾನೂನನ್ನು ಜಾರಿಗೆ ತರಬೇಕು ಎಂದು ಶಿಫಾರಸು ಮಾಡಿದ್ದಾರೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ