ಮಾಜಿ ಇಸ್ರೋ ಅಧ್ಯಕ್ಷ ಮಾಧವನ್ ನಾಯರ್ ಬಿಜೆಪಿ ಸೇರ್ಪಡೆ ; ಶಾ ಸ್ವಾಗತ
Team Udayavani, Oct 28, 2018, 5:37 PM IST
ತಿರುವನಂತಪುರಂ: ಮಾಜಿ ಇಸ್ರೋ ಅಧ್ಯಕ್ಷ ಮಾಧವನ್ ನಾಯರ್ ಅವರು ಶನಿವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಾಯರ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ.
74 ರ ಹರೆಯದ ಮಾಧವನ್ ನಾಯರ್ ಅವರು 2003 ರಿಂದ 2009 ರ ವರಗೆ ಇಸ್ರೋ ಅಧ್ಯಕ್ಷರಾಗಿ ಗಣನೀಯ ಸಾಧನೆ ಸಲ್ಲಿಸಿದ್ದರು. ಚಂದ್ರಯಾನ 1, ಇನ್ಸಾಟ್, ಪಿಎಸ್ಎಲ್ವಿ,ಜಿಎಸ್ಎಲ್ವಿ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಆಂಟ್ರಿಕ್ಸ್ ದೆವಾಸ್ ಡೀಲ್ನಲ್ಲಿ 578 ಕೋಟಿ ರೂಪಾಯಿ ಹಗರಣ ಆರೋಪ ನಾಯರ್ ವಿರುದ್ಧ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಫೆಬ್ರವರಿಯಲ್ಲಿ ದೆಹಲಿ ಕೋರ್ಟ್ ಜಾಮೀನು ನೀಡಿತ್ತು.
ಪ್ರಮುಖರು ಪಕ್ಷಕ್ಕೆ
ಕೇರಳದಲ್ಲಿ ಲೋಕಸಭಾ ಚುನಾವಣೆಯಲ್ಲಿ ಖಾತೆ ತೆರೆಯಲು ಪಣ ತೊಟ್ಟಿರುವ ಶಾ ತಿರುವಾಂಕೂರ್ ದೇವಸ್ವಂ ಬೋರ್ಡ್ ಅಧ್ಯಕ್ಷ ,ಮಾಜಿ ಕಾಂಗ್ರೆಸ್ ನಾಯಕ ಜಿ ರಮಣ್ ನಾಯರ್ , ಮಾಜಿ ಮಹಿಳಾ ಆಯೋಗದ ಸದಸ್ಯೆ ಡಾ.ಪ್ರಮೀಳಾ ದೇವಿ .ಜೆಡಿಎಸ್ ನಾಯಕ ಕರ್ನಾಕುಲಂ ,ಮಾಲಾಂಕಾರಾ ಚರ್ಚ್ನ ಥಾಮಸ್ ಜಾನ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು