ಹೈದರಾಬಾದಿನಲ್ಲಿ ಬಾಲಕರ ಲೈಂಗಿಕ ದುರ್ಬಳಕೆ: ಮದ್ರಸ ಶಿಕ್ಷಕ ಅರೆಸ್ಟ್
Team Udayavani, May 4, 2018, 11:53 AM IST
ಹೈದರಾಬಾದ್ : ಮದ್ರಸದ ಆರು ಮಂದಿ ಬಾಲಕರನ್ನು ತನ್ನ ಲೈಂಗಿಕ ತೃಷೆಗಾಗಿ ಅನೈಸರ್ಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ 23ರ ಹರೆಯದ ಮದ್ರಸ ಶಿಕ್ಷಕ ರೆಹಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ರಸ ಶಿಕ್ಷಕನಿಂದ ಕಳೆದ ಕೆಲವು ತಿಂಗಳಿಂದ ಲೈಂಗಿಕ ದುರ್ಬಳಕೆಗೆ ಗುರಿಯಾಗಿದ್ದ ಬಾಲಕರು 10ರಿಂದ 12 ವರ್ಷ ಪ್ರಾಯದ ಒಳಗಿನವರಾಗಿದ್ದಾರೆ.
ಮದ್ರಸ ಶಿಕ್ಷಕನ್ನು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆಂದು ಕೆಲವು ಬಾಲಕರು ತಮ್ಮ ಮನೆಯಲ್ಲಿ ಹೇಳಿಕೊಂಡದ್ದನ್ನು ಅನುಸರಿಸಿ ಕಳೆದ ಎ.29ರಂದು ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು.
ಶಿಕ್ಷಕ ರೆಹಾನ್ ಮದ್ರಸದಲ್ಲಿ ಬಾಲಕರಿಗೆ ಅರೆಬಿಕ್ ಕಲಿಸುತ್ತಿದ್ದ.
ಪೊಲೀಸರು ಆತನ ವಿರುದ್ಧ ಐಪಿಸಿ ಸೆ.377 (ಅಸಹಜ ಲೈಂಗಿಕ ಅಪರಾಧ) ಮತ್ತು ಪೋಕ್ಸೋ ಕಾಯಿದೆಯ ವಿವಿಧ ಸೆಕ್ಷನ್ಗಳಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನ್ಯಾಯಾಲಯ ಬಂಧಿತ ಮದ್ರಸ ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…