ಥಾಣೆ : ಮತ್ತೆ ಲಿಫ್ಟ್ ತಾಂತ್ರಿಕ ದೋಷ; ಸಿಲುಕಿಕೊಂಡ 3 ಚುನಾವಣಾ ಸಿಬಂದಿ ಪಾರು

Team Udayavani, Apr 29, 2019, 12:40 PM IST

ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಾಲೆಯೊಂದರ ಲಿಫ್ಟ್ ನಲ್ಲಿ ಒಂದು ದಿನದ ಹಿಂದಷ್ಟೇ ಆರು ಮಂದಿ ಚುನಾವಣಾ ಸಿಬಂದಿಗಳು ಸಿಕ್ಕಿ ಹಾಕಿಕೊಂಡಿದ್ದರು. ಇಂದು ಮತ್ತೆ ಅದೇ ಲಿಫ್ಟಿನಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಮೂವರು ಚುನಾವಣಾ ಸಿಬಂದಿಗಳು ಸಿಕ್ಕಿ ಹಾಕಿಕೊಂಡರು ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಕಾಲ್ವಾ ಪಟ್ಟದಲ್ಲಿನ ಸಹಕಾರ್‌ ಪ್ರಸಾರಕ್‌ ಮಂಡಲ್‌ ಸ್ಕೂಲ್‌ ನಲ್ಲಿ ಇಂದು ಸೋಮವಾರ ಬೆಳಗ್ಗೆ ಲಿಫ್ಟ್ ಬಳಸಿದ ಮೂವರು ಚುನಾವಣಾ ಸಿಬಂದಿಗಳು ನಾಲ್ಕನೇ ಮಹಡಿ ತಲುಪುವ ಮುನ್ನವೇ ನಡುವಿನಲ್ಲಿ ಲಿಫ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡರು. ದಿನದ ಹಿಂದಷ್ಟೇ ಇದೇ ಲಿಫ್ಟಿನಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಆರು ಮಂದಿ ಚುನಾವಣಾ ಸಿಬಂದಿ ಸಿಕ್ಕಿ ಹಾಕಿಕೊಂಡಿದ್ದರು.

ಇಂದು ವಿಷಯ ತಿಳಿದು ಧಾವಿಸಿ ಬಂದು ಅಗ್ನಿ ಶಾಮಕ ದಳದವರು 15 ನಿಮಿಷಗಳ ತರುವಾಯ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ ಮೂವರು ಚುನಾವಣಾ ಸಿಬಂದಿಗಳನ್ನು ಹೊರತೆಗೆದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ