ಮಹಾಘಟಬಂಧನ್‌ ಶ್ರೀಮಂತ ಸಾಮ್ರಾಜ್ಯಗಳ ಅಸಂಬದ್ಧ ಮೈತ್ರಿ:ಪ್ರಧಾನಿ ಮೋದಿ 

Team Udayavani, Dec 23, 2018, 4:56 PM IST

ಹೊಸದಿಲ್ಲಿ: ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ ಎನ್ನುವುದು ಅಪವಿತ್ರ ಮೈತ್ರಿಯಾಗಿದ್ದು , ಶ್ರೀಮಂತ ಸಾಮ್ರಾಜ್ಯಗಳು ಅಸಂಬದ್ಧ ಮೈತ್ರಿಕೂಟ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ಚೆನ್ನೈ ಮತ್ತು ತಮಿಳುನಾಡಿನ ವಿವಿಧೆಡೆಯ ಬೂತ್‌ ಮಟ್ಟದ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸುತ್ತಿದ್ದ ವೇಳೆ ಈ ಅಭಿಪ್ರಾಯ ಹೊರ ಹಾಕಿದ್ದಾರೆ.

ಎನ್‌ಟಿ ರಾಮರಾವ್‌ ಅವರು ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸಿ ಟಿಡಿಪಿಯನ್ನು ಹುಟ್ಟು ಹಾಕಿದ್ದರು. ಆದರೆ ಇಂದು ಟಿಡಿಪಿ ಮಹಾಘಟಬಂಧನ್‌ನ ಪ್ರಮುಖ ಪಕ್ಷವಾಗಿ  ಕಾಂಗ್ರೆಸ್‌ ಸ್ನೇಹ ಮಾಡಲು ಉತ್ಸುಕವಾಗಿದೆ ಎಂದರು.

ಮಹಾಘಟಬಂಧನ್‌ನ ಕೆಲ ಪಕ್ಷಗಳು ಹೇಳುತ್ತವೆ ನಾವು ರಾಮ್‌ ಮನೋಹರ್‌ ಲೋಹಿಯಾ ಅವರ ಸಿದ್ಧಾಂತಿಗಳು ಎಂದು, ಆದರೆ ಲೋಹಿಯಾ ಅವರು ಸ್ವಯಂ ಕಾಂಗ್ರೆಸ್‌ನ ಸಿದ್ಧಾಂತಗಳನ್ನು ವಿರೋಧಿಸಿದ್ದರು ಎಂದರು.

ಮಹಾಘಟಬಂಧನ ಎನ್ನುವುದು ಕೇವಲ ವೈಯಕ್ತಿಕ ಉಳಿಯುವಿಕೆಗಾಗಿ ಮಾತ್ರ ಹೊರತು ಇದರಲ್ಲಿ ಯಾವುದೇ ಸಿದ್ಧಾಂತಗಳು ಇಲ್ಲ . ಈ ಮೈತ್ರಿ ಅಧಿಕಾರಕ್ಕಾಗಿಯೇ ಹೊರತು ಜನರಿಗಾಗಿ ಅಲ್ಲ. ಇದು ವೈಯಕ್ತಿಕ ಲಾಭಕ್ಕಾಗಿ ಹೊರತು ಜನರ ಆಕಾಂಕ್ಷೆಗಳನ್ನು ಈಡೇರಿಸಲು ಅಲ್ಲ  ಎಂದರು.

ಮಹಾಘಟಬಂಧನದಲ್ಲಿರುವ ಹಲವು ನಾಯಕರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಪಾಲಾಗಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಲಿ ಎಂದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ