ಮಹಾರಾಷ್ಟ್ರದ ವಿಶ್ವ ವಿಖ್ಯಾತ ಎಲ್ಲೋರಾಕ್ಕೆ ಸಿಗಲಿದೆ ಹೈಡ್ರಾಲಿಕ್ ಲಿಫ್ಟ್ ವ್ಯವಸ್ಥೆ
Team Udayavani, Aug 2, 2022, 7:45 AM IST
ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಇರುವ ಎಲ್ಲೋರಾದಲ್ಲಿ ಹೈಡ್ರಾಲಿಕ್ ಲಿಫ್ಟ್ ವ್ಯವಸ್ಥೆ ಪ್ರವಾಸಿಗರ ಅನುಕೂಲಕ್ಕಾಗಿ ಜಾರಿಗೆ ಬರಲಿದೆ.
ಯುನೆಸ್ಕೋದ ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿರುವ ಎಲ್ಲೋರಾ ಗುಹಾ ಪ್ರದೇಶದಲ್ಲಿ ಇಂಥ ವ್ಯವಸ್ಥೆಯನ್ನು ಜಾರಿಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಹೀಗಾಗಿ, ದೇಶದಲ್ಲಿಯೇ ಮೊದಲ ಬಾರಿಗೆ ಹೈಡ್ರಾಲಿಕ್ ಲಿಫ್ಟ್ ವ್ಯವಸ್ಥೆಯನ್ನು ಹೊಂದಲಿರುವ ಐತಿಹಾಸಿಕ ಸ್ಮಾರಕ ಇದಾಗಲಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಔರಂಗಾಬಾದ್ ವಲಯದ ಸೂಪರಿಂಟೆಂಡೆಂಟ್ ಮಿಲಾನ್ ಕುಮಾರ್ ಹೇಳಿದ್ದಾರೆ.
ಇಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಧರ್ಮಕ್ಕೆ ಸೇರಿದ ವಿವಿಧ ಶಿಲ್ಪಕಲಾ ಕೆತ್ತನೆಗಳು 500 ಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಒಟ್ಟು 34 ಶಿಲ್ಪಕಲೆಯ ಗುಹೆಗಳ ಪೈಕಿ 16ನೇ ನಂಬರ್ನ ಗುಹೆ ಎರಡು ಅಂತಸ್ತನ್ನು ಹೊಂದಿದ್ದು, ಅಲ್ಲಿ ಪ್ರವಾಸಿಗಳು ವೀಕ್ಷಣೆಗಾಗಿ ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಪ್ರವಾಸಿಗರ ಅನುಕೂಲಕ್ಕಾಗಿ ಇಂಥ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕುಮಾರ್ ಹೇಳಿದ್ದಾರೆ.