ಗಣರಾಜ್ಯೋತ್ಸವ: ಅಬೈಡ್ ವಿತ್ ಮಿ ಗೀತೆ ಬಳಕೆಯಿಲ್ಲ
Team Udayavani, Jan 22, 2022, 9:45 PM IST
ನವದೆಹಲಿ: ಮಹಾತ್ಮ ಗಾಂಧಿಯವರಿಗೆ ಪ್ರಿಯವಾದ ಗೀತೆಯಾಗಿದ್ದ “ಅಬೈಡ್ ವಿತ್ ಮಿ’ ಗೀತೆಯನ್ನು ಜ.29ರ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಲ್ಲಿ ನುಡಿಸುವುದಿಲ್ಲ ಎಂದು ಭಾರತೀಯ ಸೇನೆಯು ಶನಿವಾರದಂದು ತಿಳಿಸಿದೆ.
ಪ್ರತಿ ವರ್ಷ ಜ.29ರಂದು ಭಾರತೀಯ ಸೇನೆಯ ಬ್ಯಾಂಡ್ಗಳು ಗಣರಾಜ್ಯೋತ್ಸವ ದಿನದ ಮುಕ್ತಾಯ ಸೂಚಕವಾಗಿ ರಾಜಪಥದಲ್ಲಿ ಗೀತೆಗಳನ್ನು ನುಡಿಸುತ್ತಾ ಸಾಗುತ್ತವೆ.
1847ರಲ್ಲಿ ಸ್ಕಾಟಿಷ್ ಕವಿ ಹೆನ್ರಿ ಫ್ರಾನ್ಸಿಸ್ ಲೈಟ್ ಬರೆದಿದ್ದ “ಅಬೈಡ್ ವಿತ್ ಮಿ’ ಗೀತೆಯನ್ನು 1950ರಿಂದಲೂ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದ ಭಾಗವಾಗಿಸಿಕೊಳ್ಳಲಾಗಿತ್ತು.
ಈ ಗೀತೆ ಮಹಾತ್ಮ ಗಾಂಧಿಯವರಿಗೆ ಅತ್ಯಂತ ಪ್ರೀತಿಯ ಗೀತೆ ಕೂಡ ಆಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಗೀತೆಗಳ ಬದಲಾಗಿ ಭಾರತೀಯ ಹಾಡುಗಳಿಗೆ ಪ್ರಾಮುಖ್ಯತೆ ಕೊಟ್ಟು, ನುಡಿಸಲಾಗುತ್ತಿದೆ. ಅದೇ ಹಿನ್ನೆಲೆಯಲ್ಲಿ ಆ ಹಾಡನ್ನು ಕೈ ಬಿಟ್ಟಿರುವುದಾಗಿ ಸೇನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು