ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ
Team Udayavani, Mar 5, 2021, 12:36 AM IST
ಹೊಸದಿಲ್ಲಿ: ಕ್ಯು.ಎಸ್. ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಜಾಗತಿಕ ವಿಶ್ವವಿದ್ಯಾನಿಲಯಗಳ ಶ್ರೇಯಾಂಕ ಬಿಡುಗಡೆಯಾಗಿದ್ದು, ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಈ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಲಗ್ಗೆಯಿಟ್ಟಿದ್ದು, ಟಾಪ್ 200ರಲ್ಲಿ ಸ್ಥಾನ ಪಡೆದಿದೆ. ಮಣಿಪಾಲ ಫಾರ್ಮಸಿ ವಿಭಾಗದಲ್ಲಿ 151, ಫಾರ್ಮಕಾಲಜಿ ವಿಭಾಗದಲ್ಲಿ 200ನೇ ಸ್ಥಾನ ಪಡೆದಿದೆ. ಒಟ್ಟು ಭಾರತದ 52 ಶೈಕ್ಷಣಿಕ ಸಂಸ್ಥೆಗಳು ಈ ಸ್ಪರ್ಧೆಯಲ್ಲಿದ್ದವು. 51 ಬೇರೆಬೇರೆ ಶೈಕ್ಷಣಿಕ ವಿಷಯಗಳಡಿ, 253 ಬೇರೆಬೇರೆ ಕಾರ್ಯಕ್ರಮಗಳ ಗುಣಮಟ್ಟ ಪರಿಶೀಲಿಸಿ ಈ ಶ್ರೇಯಾಂಕ ನೀಡಲಾಗುತ್ತದೆ.
ಟಾಪ್ 100ರಲ್ಲಿ 12 ವಿವಿಗಳು: ಅಗ್ರ 100 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದ 12 ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. ರಸಾಯನ ಶಾಸ್ತ್ರ, ಪೆಟ್ರೋಲಿಯಂ, ನಾಗರಿಕ, ಮೆಕ್ಯಾನಿಕಲ್ ಸೇರಿದಂತೆ ಹಲವು ಎಂಜಿನಿಯರಿಂಗ್ ವಿಷಯಗಳು, ಕಾನೂನು, ಅಭಿವೃದ್ಧಿ, ಕಲೆ ಸೇರಿದಂತೆ ಇತರ ವಿಷಯಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಪರಿಗಣಿಸಿ ರ್‍ಯಾಂಕಿಂಗ್ ನೀಡಲಾಗಿದೆ. ಅದರಲ್ಲೂ ಪೆಟ್ರೋಲಿಯಂ ಎಂಜಿನಿಯರಿಂಗ್ ವಿಭಾಗದಲ್ಲಿ ಐಐಟಿ ಮದ್ರಾಸ್ ಅಗ್ರ 30ನೇ ಸ್ಥಾನದಲ್ಲಿದ್ದರೆ, ಐಐಟಿ ಬಾಂಬೆ 41, ಐಐಟಿ ಖರಗ್‌ಪುರ 44ನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಟಾಪ್ 50ರೊಳಗಿನ ಸಾಧನೆ ಮಾಡಿವೆ. 50ರ ಪಟ್ಟಿಯಾಚೆಗೆ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ವಸ್ತುವಿಜ್ಞಾನದಲ್ಲಿ 78, ರಸಾಯನ ಶಾಸ್ತ್ರದಲ್ಲಿ 93ನೇ ಸ್ಥಾನ ಪಡೆದಿದೆ. ಐಐಟಿ ಡೆಲ್ಲಿ 100ನೇ ಸ್ಥಾನದಲ್ಲಿದೆ.
ವಾಣಿಜ್ಯದಲ್ಲಿ ರಾಜ್ಯದ Mahe in University Global Rankingಐಐಎಂ: ವಾಣಿಜ್ಯ ವಿಭಾಗದಲ್ಲಿ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹಾಗೂ ಅಹ್ಮದಾಬಾದ್‌ನ ಐಐಎಂ ಸಂಸ್ಥೆಗಳು ಕ್ರಮವಾಗಿ 76 ಮತ್ತು 80ನೇ ಸ್ಥಾನ ಪಡೆದಿವೆ. ಈ ಪಟ್ಟಿಯಲ್ಲಿ ಹಾರ್ವರ್ಡ್ ವಿವಿ 1ನೇ ಸ್ಥಾನದಲ್ಲಿದೆ.
ಭಾರತದ ಏಕೈಕ ವಿವಿ: ಕಾನೂನು ವಿಷಯಾಧಾರಿತ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದಿಂದ ಜಿಂದಾಲ್ ಗ್ಲೋಬಲ್ ಲಾ ಕಾಲೇಜು ಪಟ್ಟಿಯಲ್ಲಿ ಅದು 76ನೇ ಸ್ಥಾನ ಗಳಿಸಿದೆ.