- Saturday 07 Dec 2019
Malegaon: ಸಾಧ್ವಿ, ಪುರೋಹಿತ್ ವಿರುದ್ಧ ಸಂಚು ದೋಷಾರೋಪ ಇಲ್ಲ
Team Udayavani, Dec 27, 2017, 5:22 PM IST
ಮುಂಬಯಿ : 2008ರ ಮಾಲೇಗಾಂವ್ ಬ್ಲಾಸ್ಟ್ ಪ್ರಕರಣದ ಆರೋಪಿಗಳಾಗಿರುವ ಸಾಧ್ವಿ ಪ್ರಜ್ಞಾ, ಮೇಜರ್ ರಮೇಶ್ ಉಪಾಧ್ಯಾಯ,ಅಜಯ್ ರಾಹೀಕರ್ ಮತ್ತು ಲೆ| ಕ| ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಇಲ್ಲಿನ ವಿಶೇಷ ಸೆಶನ್ಸ್ ನ್ಯಾಯಾಲಯ, 1999ರ ಕರಾಳ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ (ಮಕೋಕ) ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಸೆ.17, 20 ಮತ್ತು 13ರ ಅಡಿಯ ವಿಚಾರಣೆಯಿಂದ ಮುಕ್ತಗೊಳಿಸಿದೆ.
ಆದರೆ ಆರೋಪಿಗಳಾದ ಸಾಧ್ವಿ ಪ್ರಜ್ಞಾ ಮತ್ತು ಲೆ| ಕ| ಪುರೋಹಿತ್ ಅವರನ್ನು ಯುಎಪಿಎ ಕಾಯಿದೆಯ ಸೆ.18 ಮತ್ತು ಐಪಿಸಿಯ ಇತರ ಸೆಕ್ಷನ್‌ಗಳಡಿ ವಿಚಾರಣೆಗೆ ಗುರಿಪಡಿಸಲಾಗುವುದು ಎಂದು ಹೇಳಿದೆ.
ಇದೇ ವೇಳೆ ಮುಂಬಯಿ ಸೆಶನ್ಸ್ ಕೋರ್ಟ್ ಮಾಲೇಗಾಂವ್ ಬ್ಲಾಸ್ಟ್ ಪ್ರಕರಣದ ಇತರ ಮೂವರು ಆರೋಪಿಗಳನ್ನು ಎಲ್ಲ ಆಪಾದನೆಗಳಿಂದ ಮುಕ್ತಗೊಳಿಸಿದೆ. ಎನ್‌ಐಎ ಈ ಮೂವರು ಆರೋಪಿಗಳಿಗೆ ತನ್ನ ಅಂತಿಮ ಚಾರ್ಜ್‌ಶೀಟ್‌ನಲ್ಲಿ ಕ್ಲೀನ್ ಚಿಟ್ ನೀಡಿತ್ತು. ಹೀಗೆ ಕೋರ್ಟ್ ವಿಚಾರಣೆಯಿಂದ ಮುಕ್ತರಾದವರೆಂದರೆ ಶಿವನಾರಾಯಣ ಕಾಲಸಂಗ್ರ, ಶ್ಯಾಮ ಸಾಹು ಮತ್ತು ಪ್ರವೀಣ್ ತಕ್ಕಾಲ್ಕಿ.
ಈ ನಡುವೆ ರಾಕೇಶ್ ಧವಡೆ ಮತ್ತು ಜಗದೀಶ್ ಮ್ಹಾತ್ರೆ ಅವರನ್ನು ಕೇವಲ ಶಸ್ತ್ರಾಸ್ತ್ರ ಕಾಯಿದೆಯಡಿ ದೋಷಾರೋಪಕ್ಕೆ ಗುರಿಪಡಿಸಲಾಗಿದ್ದು ಇತರೆಲ್ಲ ದೋಪಾರೋಪಗಳಿಂದ ಮುಕ್ತಗೊಳಿಸಲಾಗಿದೆ.
2008ರ ಸೆ.29ರ ಸಂಜೆ ಮಾಲೇಗಾಂವ್‌ನ ನೂರಾಜಿ ಮಸೀದಿ ಬಳಿ ಅತ್ಯಂತ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡು ಆರು ಮಂದಿ ಮಡಿದಿದ್ದು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದನ್ನು ಹಿಂದೂ ಭಯೋತ್ಪಾದಕ ಕೃತ್ಯವೆಂದು ಬಣ್ಣಿಸಲಾಗಿತ್ತು.
ಈ ವಿಭಾಗದಿಂದ ಇನ್ನಷ್ಟು
-
ನವದೆಹಲಿ: ಸಾವಿನೊಂದಿಗೆ ಹೋರಾಟ ನಡೆಸುತ್ತಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಶುಕ್ರವಾರ ತಡರಾತ್ರಿ 11;30 ಕ್ಕೆ ಹೈದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ....
-
ಆರೋಪಿಗಳ ಎನ್ಕೌಂಟರ್ ನಡೆಯುವುದಕ್ಕೂ 5 ದಿನ ಮುಂಚಿತವಾಗಿಯೇ ಈ ಕುರಿತು ಟ್ವೀಟ್ವೊಂದು 'ಭವಿಷ್ಯ' ನುಡಿದಿತ್ತು. ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕೆಂದರೆ...
-
ಲಕ್ನೋ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಎಗ್ಗಿಲ್ಲದೇ ಮುಂದುವರಿದಿದೆ. ಗುರುವಾರವಷ್ಟೇ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಮೇಲೆ ಬೆಂಕಿ ಹಚ್ಚಿ...
-
ಹೊಸದಿಲ್ಲಿ: ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದವರಿಗೆ ಉತ್ತಮ ನಾಳೆಯ ಅವಕಾಶವನ್ನು ಕಲ್ಪಿಸುವುದೇ ಪೌರತ್ವ (ತಿದ್ದುಪಡಿ)...
-
ಹೊಸದಿಲ್ಲಿ: ಈರುಳ್ಳಿ ದರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿ ಸುತ್ತಿಲ್ಲ. ಶುಕ್ರವಾರ ಈರುಳ್ಳಿ ಬೆಲೆ ಕೇಜಿಗೆ 165 ರೂ. ತಲುಪಿದೆ. ವಿದೇಶಗಳಿಂದ ಆಮದು ಮಾಡಿಕೊಂಡಿರುವ...
ಹೊಸ ಸೇರ್ಪಡೆ
-
ನವದೆಹಲಿ: ಸಾವಿನೊಂದಿಗೆ ಹೋರಾಟ ನಡೆಸುತ್ತಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಶುಕ್ರವಾರ ತಡರಾತ್ರಿ 11;30 ಕ್ಕೆ ಹೈದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ....
-
ಆರೋಪಿಗಳ ಎನ್ಕೌಂಟರ್ ನಡೆಯುವುದಕ್ಕೂ 5 ದಿನ ಮುಂಚಿತವಾಗಿಯೇ ಈ ಕುರಿತು ಟ್ವೀಟ್ವೊಂದು 'ಭವಿಷ್ಯ' ನುಡಿದಿತ್ತು. ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕೆಂದರೆ...
-
ಬೆಂಗಳೂರು: ಉಪಚುನಾವಣೆಯಲ್ಲಿ ಎರಡಂಕಿ ಸ್ಥಾನ ಗೆದ್ದು ಸರ್ಕಾರ ಸುಭದ್ರಗೊಳಿಸುವ ವಿಶ್ವಾಸದಲ್ಲಿರುವ ಬಿಜೆಪಿ, ಆಯ್ದ ಪ್ರಮುಖ ಕ್ಷೇತ್ರಗಳಲ್ಲಿ ವ್ಯತಿರಿಕ್ತ...
-
""ಮನುಷ್ಯಜೀವಿ ಮೂಲತಃ ಕ್ರೂರಿ ಮತ್ತು ದುಷ್ಟ. ಹ್ಯೂಮನ್ ನೇಚರ್ನ ಪ್ರಧಾನ ಗುಣ ಈವಿಲ್. ಅಂದರೆ ಕೆಟ್ಟದ್ದು.'' ಹೀಗೆ ತನ್ನ ಪ್ರಸಿದ್ಧ ಪುಸ್ತಕ ಲೇವಿಯಾದನ್ ದಲ್ಲಿ...
-
ಹೈದರಾಬಾದ್ಅತ್ಯಾಚಾರ-ಹತ್ಯೆ ಪ್ರಕರಣದ ಆರೋಪಿಗಳೆಲ್ಲ ಎನ್ಕೌಂಟರ್ನಲ್ಲಿ ಅಂತ್ಯವಾಗಿದ್ದಾರೆ. ಈ ವಿದ್ಯಮಾನಕ್ಕೆ ದೇಶಾದ್ಯಂತ ಸಂಭ್ರಮಾಚರಣೆಯ ಜತೆ ಜತೆಗೆ,...