ಐದರ ಬಾಲಕನ ಮೇಲೆ ಬಲವಂತದ ಅನೈಸರ್ಗಿಕ ಸೆಕ್ಸ್ : ಯುವಕ ಸೆರೆ
Team Udayavani, Aug 27, 2018, 4:10 PM IST
ಥಾಣೆ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಐದು ವರ್ಷದ ಬಾಲಕನ ಮೇಲೆ ಬಲವಂತದ ಅನೈಸರ್ಗಿಕ ಸೆಕ್ಸ್ ನಡೆಸಿದ ಆರೋಪದ ಮೇಲೆ 20 ವರ್ಷ ಪ್ರಾಯದ ತರುಣನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ತರುಣನು ಬಾಲಕನನ್ನು ಆತನ ಮನೆಯಿಂದ ನಿನ್ನೆ ಭಾನುವಾರ ಮಧ್ಯಾಹ್ನ ನಾಲ್ಕು ಗಂಟೆಯ ವೇಳೆಗೆ ಕರೆದೊಯ್ದು ವಕನಪಾಡಾದ ಕಾಜಿ ಚಾಳ್ ನ ನಿರ್ಜನ ಪ್ರದೇಶದಲ್ಲಿ ಆತನ ಮೇಲೆ ಬಲವಂತದ ಅನೈಸರ್ಗಿಕ ಸೆಕ್ಸ್ ನಡೆಸಿದ ಎಂದು ವಾಲೀವ್ ಪೊಲೀಸ್ ಠಾಣೆಯ ಸಹಾಯಕ ಎಸ್ಐ ಎಸ್ಎಸ್ ಚೌಧರಿ ಹೇಳಿದರು.
ತನ್ನ ಮೇಲಾದ ಲೈಂಗಿಕ ದೌರ್ಜನ್ಯವನ್ನು ಬಾಲಕನು ತನ್ನ ಹೆತ್ತವರಲ್ಲಿ ಹೇಳಿದಾಗ ಅವರು ಒಡನೆಯೇ ಪೊಲೀಸರಿಗೆ ದೂರು ನೀಡಿದರು. ಆ ಪ್ರಕಾರ ಪೊಲೀಸರು ನಿನ್ನೆ ಸಂಜೆ ಆರೋಪಿಯನ್ನು ಬಂಧಿಸಿದರು ಎಂದು ಚೌಧರಿ ತಿಳಿಸಿದರು.
ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!