ತಾಳಿ ಕಟ್ಟಲು ಮುಂದಾದ ವರನಿಗೆ ಶಾಕ್: ಅದಾಗಲೇ ಯುವತಿಯ ಕೊರಳಲ್ಲಿತ್ತು ತಾಳಿ. ಮುಂದೇನಾಯಿತು ?

Team Udayavani, Dec 8, 2019, 2:13 PM IST

ಲಕ್ನೋ: ಮದುವೆಗೆ ವರ ತಡವಾಗಿ ಬಂದಿದ್ದಕ್ಕೆ ಬೇಸರಗೊಂಡ ವಧುವಿನ ಕುಟುಂಬಸ್ಥರು ಬೇರೊಬ್ಬನ ಜೊತೆ ವಿವಾಹವನ್ನು ಸಾಂಗವಾಗಿ ನೆರವೇರಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ನಿಶ್ಚಯವಾಗಿದ್ದ ಮದುವೆಗೆ ವರ ತಡವಾಗಿ ಬಂದಿದ್ದು, ಈ ವೇಳೆ ವಧುವಿನ ಕೊರಳಲ್ಲಿ ಮಾಂಗಲ್ಯ ಸರ ಕಂಡು ಕಂಗಾಲಾಗಿದ್ದಾನೆ. ಈ ಬಗ್ಗೆ ಯುವತಿಯ ಕುಟುಂಬಸ್ಥರಲ್ಲಿ ಪ್ರಶ್ನಿಸಿದಾಗ ತುಂಬಾ ಸಮಯ ಕಾದರೂ ವರನ ಕಡೆಯವರು ಯಾರು ಬರಲಿಲ್ಲವಾದ್ದರಿಂದ ಬೇರೊಬ್ಬನ ಜೊತೆ ವಿವಾಹ ಮಾಡಲಾಗಿದೆ ಎಂದು ಸಮಜಾಯಿಸಿ ನೀಡಿದ್ದಾರೆ.

ಆದದ್ದೇನು ?

ಉತ್ತರ ಪ್ರದೇಶದ ಬಿಜ್ನೋರ್​​​ನ ಮದುವೆ ಮಂಟಪದಲ್ಲಿ ವಿವಾಹಕ್ಕೆ  ಸಿದ್ದತೆ ನಡೆದಿತ್ತು. ಮಂಟಪ ಕೂಡ ಜನರಿಂದ ತುಂಬಿ ತುಳುಕುತ್ತಿತ್ತು. ಆದರೆ ಮುಖ್ಯವಾಗಿ ಮದುವೆ ಗಂಡು ಮತ್ತು ಆತನ ಕುಟುಂಬಸ್ಥರು ಇನ್ನೂ ಬಂದಿರಲಿಲ್ಲ. ವಧುವಿನ ಕಡೆಯವರು ತುಂಬಾ ಸಮಯ ಕಾದರೂ ಸಹ ವರನ ಕಡೆಯವರು ಮದುವೆ ಮಂಟಪಕ್ಕೆ ಬರಲೇ ಇಲ್ಲ.

ಕಾದು ಕಾದು ಸುಸ್ತಾಗಿ ವಧು ಮದುವೆ ನಿಶ್ಚಯವಾಗಿದ್ದ ಹುಡುಗನನ್ನು ತಿರಸ್ಕರಿಸಿ, ಕೊನೆಗೆ ಅದೇ ಮಂಟಪದಲ್ಲಿ, ಅದೇ ಮುಹೂರ್ತದಲ್ಲಿ ಬೇರೆ ಹುಡುಗನನ್ನು ಮದುವೆಯಾಗಿದ್ದಾಳೆ. ಈ ವೇಳೆ ವರನ ಕಡೆಯಯವರು ಹೆಚ್ಚಿನ ವರದಕ್ಷಿಣೆಯಾಗಿ ಬೈಕ್ ಮತ್ತು ಹಣ  ಕೇಳಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ನಾವು ಅಷ್ಟು ಹಣ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಅದ್ದರಿಂದ ಬೇರೊಬ್ಬನ ಜೊತೆ ವಿವಾಹ ನೆರವೇರಿಸಿದ್ದೇವೆ ಎಂದು ಯುವತಿಯ ಕಡೆಯವರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ