ಅರವತ್ತು ಸಾವಿರದ ಚಪ್ಪಲಿ ಕಳೆದುಕೊಂಡ ವ್ಯಕ್ತಿಯಿಂದ ಪೊಲೀಸ್ ದೂರು

Team Udayavani, Nov 18, 2019, 9:44 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಚೆನ್ನೈ: ವ್ಯಕ್ತಿಯೊಬ್ಬರು ತಮ್ಮ ಬಳಿಯಲ್ಲಿದ್ದ 60 ಸಾವಿರ ರೂಪಾಯಿ ಮೌಲ್ಯದ ಚಪ್ಪಲಿಗಳನ್ನು ಕಳೆದುಕೊಂಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ಸಲ್ಲಿಸಿದ್ದಾರೆ. ಚೆನ್ನೈನ ಕಿಲ್ಪೌಕ್ ನ ದಿವಾನ್ ಬಹುದ್ದೂರ್ ಷಣ್ಮುಗಂ ರಸ್ತೆಯಲ್ಲಿನ ಅಬ್ದುಲ್ ಹಫೀಝ್ ಎನ್ನುವ ವ್ಯಕ್ತಿಯೇ ಇಷ್ಟೊಂದು ಮೌಲ್ಯದ ಚಪ್ಪಲಿಗಳನ್ನು ಕಳೆದುಕೊಂಡಿರುವ ವ್ಯಕ್ತಿಯಾಗಿದ್ದಾರೆ.

ತನ್ನ ಮನೆಯಿಂದಲೇ ಈ ಚಪ್ಪಲಿಗಳು ಕಳವಾಗಿರುವುದಾಗಿ ಅಬ್ದುಲ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕಳವಾಗಿರುವ ಈ ಚಪ್ಪಲಿಗಳೆಲ್ಲವೂ ಹೆಸರಾಂತ ಬ್ರ್ಯಾಂಡಿನದ್ದಾಗಿದ್ದವು ಮತ್ತು ಇವುಗಳನ್ನು ಅಬ್ದುಲ್ ಅವರು ತಮ್ಮ ಮನೆಯ ಎದುರು ಅಂಗಣ ಭಾಗದಲ್ಲಿ ಇರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಬ್ದುಲ್ ಅವರಿಂದ ಅಧಿಕೃತವಾಗಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಅವರ ಮನೆಯ ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸುತ್ತಿದ್ದಾರೆ. ಮತ್ತು ಅವರ ಮನೆ ಕೆಲಸದವರನ್ನು ಮತ್ತು ನೆರೆಹೊರೆಯವರನ್ನು ಪ್ರಶ್ನಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಒಟ್ಟಿನಲ್ಲಿ ಪ್ರತಿನಿತ್ಯ ಬೇರೆ ಬೇರೆ ಕೇಸುಗಳನ್ನು ದಾಖಲಿಸಿಕೊಳ್ಳುವ ಪೊಲೀಸರಿಗೆ ಈ ಚಪ್ಪಲಿ ಕಳ್ಳತನದ ವಿಚಿತ್ರ ಪ್ರಕರಣ ತಲೆಕೆಡಿಸಿರುವುದು ಸುಳ್ಳಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ