ಹರಿಯಾಣ: ದನ ಕಳ್ಳನೆಂದು ಹೊಡೆದು ಕೊಂದ ಗ್ರಾಮಸ್ಥರು, ಓರ್ವ ಸೆರೆ
Team Udayavani, Aug 4, 2018, 3:46 PM IST
ಹೊಸದಿಲ್ಲಿ : ರಾಜಸ್ಥಾನದ ಅಲವಾರ್‌ನಲ್ಲಿ ಗೋ ಕಳ್ಳಸಾಗಾಟಗಾರನೆಂದು ಶಂಕಿಸಿ ವ್ಯಕ್ತಿಯೋರ್ವನನ್ನು ಉದ್ರಿಕ್ತ ಸಮೂಹ ಚಚ್ಚಿ ಕೊಂದ ಹದಿನೈದು ದಿನಗಳ ತರುವಾಯ ಇದೀಗ ಅದೇ ರೀತಿಯ ಇನ್ನೊಂದು ಘಟನೆ ಹರಿಯಾಣದಲ್ಲಿ ನಡೆದಿದೆ.
ಗುರುವಾರ – ಶುಕ್ರವಾರ ನಡುವಿನ ರಾತ್ರಿ ಹರಿಯಾಣದ ಪಲವಾಲ್ ಜಿಲ್ಲೆಯ ಬೆಹರೋಲಾ ಗ್ರಾಮದಲ್ಲಿ ದನ ಕಳ್ಳನೆಂಬ ಶಂಕೆಯಲ್ಲಿ ಗ್ರಾಮಸ್ಥರು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ. ಈತನ ಜತೆಗಿದ್ದ ಇನ್ನಿಬ್ಬರು ಸ್ಥಳದಿಂದ ಪಲಾಯನ ಮಾಡಿದ್ದಾರೆ.
ವ್ಯಕ್ತಿಯನ್ನು ಚಚ್ಚಿ ಸಾಯಿಸಿದ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಸಹೋದರರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಮೂವರ ಪೈಕಿ ಒಬ್ಟಾತನನ್ನು ಅವರು ಬಂಧಿಸಿದ್ದಾರೆ.
ಸಮೂಹ ಹಿಂಸೆಯಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಗೋ ಕಳ್ಳತನದ ಶಂಕೆಯಲ್ಲಿ ಶಂಕಿತರನ್ನು ಉದ್ರಿಕ್ತರ ಗುಂಪು ಹೊಡೆದು ಸಾಯಿಸುವ ಪ್ರಕರಣಗಳನ್ನು ಕಠಿನ ಕಾನೂನಿನ ಮೂಲಕ ತಡೆಯಲು ಕೇಂದ್ರ ಸರಕಾರ, ಸುಪ್ರೀಂ ಕೋರ್ಟ್ ಸಲಹೆಯ ಪ್ರಕರ, ಹೊಸ ಕಾನೂನನ್ನು ಜಾರಿಗೆ ತರುವ ಚಿಂತನೆಯನ್ನು ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಸ್-ಲಾರಿ ನಡುವೆ ಭೀಕರ ಅಪಘಾತ: ಎಂಟು ಜನರ ದುರ್ಮರಣ; 27 ಮಂದಿಗೆ ಗಂಭೀರ ಗಾಯ
ಇನ್ಫಿನಿಕ್ಸ್ ಹಾಟ್ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ
ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ
ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್ ಪವರ್; ಇಂದು ಗುಜರಾತ್-ರಾಜಸ್ಥಾನ್ ಮುಖಾಮುಖಿ
ಚೀನ ತಡೆಗೆ ಹೊಸ ವೇದಿಕೆ: ಅಮೆರಿಕ ನೇತೃತ್ವದಲ್ಲಿ ಐಪಿಇಎಫ್ ರಚನೆ