ರೈತಹೋರಾಟದಲ್ಲಿ ಪಾಲ್ಗೊಳ್ಳಲು ತೆರಳಿದವರ ಕಾರಿಗೆ ಬೆಂಕಿ: ಓರ್ವ ಸಜೀವ ದಹನ !
Team Udayavani, Nov 29, 2020, 4:29 PM IST
ನವದೆಹಲಿ: ರೈತಹೋರಾಟದಲ್ಲಿ ಭಾಗಿಯಾಗಲು ತೆರಳುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬರು, ಕಾರಿಗೆ ಬೆಂಕಿ ತಗುಲಿದ್ದರಿಂದ ಸಜೀವ ದಹನರಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಪಂಜಾಬ್ ನ ದನೌಲ ಮೂಲದ ಜನಕ್ ರಾಜ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ರೈತ ಹೋರಾಟದಲ್ಲಿ ಪಾಲ್ಗೊಳ್ಳಲೆಂದು ಟಿಕ್ರಿ ಗಡಿಗೆ ತೆರಳುತ್ತಿದ್ದ ವೇಳೆ, ಜನಕ್ ರಾಜ್ ಇದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಜನಕ್ ರಾಜ್ ನಿದ್ರಿಸುತ್ತಿದ್ದರು ಎನ್ನಲಾಗಿದೆ. ನಝಾಫರ್ ಗಢದ ಫ್ಲೈ ಓವರ್ ನಲ್ಲಿ ಪ್ರಯಾಣಿಸುತ್ತಿರುವಾಗ ಈ ದುರ್ಘಟನೆ ನಡೆದಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಝಜ್ಜಾರ್ ಎಸ್ ಪಿ ರಾಜೇಶ್ ದುಗ್ಗಲ್, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹಲವು ರೈತರು ಬಹದ್ದೂರ್ ಗಢದಿಂದ ತೆರಳುತ್ತಿದ್ದರು. 11:30ರ ರಾತ್ರಿಯ ವೇಳೆ ರೈತರು ಪ್ರಯಾಣಿಸುತ್ತಿದ್ದ 1 ಟ್ರ್ಯಾಕ್ಟರ್ ರಿಪೇರಿಯಾಗಿದ್ದರಿಂದ, ಹಲವು ವಾಹನಗಳನ್ನು ಕೆಲಕಾಲ ಫ್ಲೈ ಓವರ್ ಮೇಲೆ ನಿಲ್ಲಿಸಲಾಗಿತ್ತು. ಈ ವೇಳೆ ಸ್ವಿಫ್ಟ್ ಕಾರಿನಲ್ಲಿ ಜನಕ್ ರಾಜ್ ನಿದ್ರಿಸುತ್ತಿದ್ದರು. ತಡ ರಾತ್ರಿ 1:30ರ ವೇಳೆಗೆ ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದರಿಂದ ಜನಕ್ ರಾಜ್ ಸಜೀವ ದಹನವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ಥಾನ ಸೇನಾ ನೆಲೆ ಗುರಿಯಾಗಿಸಿ ಕಾರ್ ಬಾಂಬ್ ಸ್ಪೋಟ; 31 ಸೈನಿಕರ ಸಾವು
ಈ ವೇಳೆ ಜನಕ್ ರಾಜ್ ಸ್ನೇಹಿತರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ.ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಸಹೋದರರ ಸವಾಲ್: ಸತೀಶ್ ಜಾರಕಿಹೊಳಿ ಬೆಂಬಲಿಗರು ಬಿಜೆಪಿ ಸೇರ್ಪಡೆ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಎಂಐ ಫೋನ್ ಕಂಪನಿಯಿಂದ ಬಡ ವಿದ್ಯಾರ್ಥಿಗಳಿಗೆ ಫೋನ್ಗಳ ದೇಣಿಗೆ
ಮುಂಬೈಯನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು: ಡಿಸಿಎಂ ಲಕ್ಷ್ಮಣ ಸವದಿ
ಪರಿಷತ್ ಉಪಸಭಾಪತಿ ಚುನಾವಣೆ: BJPಯಿಂದ ಪ್ರಾಣೇಶ್, ಕಾಂಗ್ರೆಸ್ ನಿಂದ ಕೆ.ಸಿ.ಕೊಂಡಯ್ಯ ಸ್ಪರ್ಧೆ
ಆನ್ಲೈನ್ ನಲ್ಲಿ ಸೋರಿಕೆಯಾಯ್ತು ಒನ್ ಪ್ಲಸ್ 9 ಫೋನ್ ನ ಚಿತ್ರ..!
ಮಾರಕಾಸ್ತ್ರ ಹಿಡಿದು ಯುವಕರಿಗೆ ಥಳಿತ, ದರೋಡೆ: ಆರು ಮಂದಿ ಖದೀಮರ ಸೆರೆ