ವ್ಯಕ್ತಿಯೊಬ್ಬ ತನಗೇ ಹಾರಿಸಿಕೊಂಡ ಗುಂಡು, ತಲೆಯನ್ನು ಭೇದಿಸಿ ಗರ್ಭಿಣಿ ಪತ್ನಿಗೆ ತಗುಲಿತು!
Team Udayavani, May 24, 2020, 9:01 AM IST
ದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನಗೇ ತಾನೇ ಗುಂಡು ಹಾರಿಸಿಕೊಂಡಿದ್ದು, ಬುಲೆಟ್ ತಲೆಯ ಮೂಲಕ ಹೊರಬಂದು ಪಕ್ಕದಲ್ಲಿದ್ದ ಗರ್ಭಿಣಿ ಪತ್ನಿಗೆ ತಾಕಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಕಳೆದ ಶುಕ್ರವಾರ 34 ವರ್ಷದ ವ್ಯಕ್ತಿಯೊಬ್ಬ ತನ್ನ 7 ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ನಿರುದ್ಯೋಗದ ವಿಚಾರವಾಗಿ ಇಬ್ಬರಿಗೂ ಕಲಹವೇರ್ಪಟ್ಟಿದೆ. ಕೂಡಲೇ ಕಿವಿಯ ಬಳಿ ಪಿಸ್ತೂಲ್ ಇರಿಸಿಕೊಂಡು ವ್ಯಕ್ತಿ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದಾನೆ. ಆದರೇ ದುರಾದೃಷ್ಟವೆಂಬಂತೆ ಬುಲೆಟ್ ತಲೆಯಿಂದ ಹೊರಬಂದು ಪಕ್ಕದಲ್ಲಿ ಕುಳಿತಿದ್ದ ಪತ್ನಿಯ ಕುತ್ತಿಗೆ ಭಾಗಕ್ಕೆ ತಗುಲಿದೆ.
ಇದೀಗ ಗುಂಡು ಹಾರಿಸಿಕೊಂಡ ವ್ಯಕ್ತಿ ಜೀವನ್ಮರಣ ಸ್ಥಿತಿಯಲ್ಲಿ ದೆಹಲಿ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದು, ಆತನ ಪತ್ನಿ ಅಪಾಯದಿಂದ ಪಾರಾಗಿದ್ದಾರೆ.
ಮನೇಸರ್ ನ ಉಪ ಪೋಲಿಸ್ ಆಯುಕ್ತ ದೀಪಕ್ ಸಹರನ್ ಈ ಕುರಿತು ಮಾಹಿತಿ ನೀಡಿ, ಬುಲೆಟ್ ವ್ಯಕ್ತಿಯ ಕಿವಿಯನ್ನು ಭೇದಿಸಿ ಹೊರಬಂದು ಇನ್ನೊಂದು ಬದಿಯಲ್ಲಿ ಕುಳಿತಿದ್ದ ಪತ್ನಿಯ ಕುತ್ತಿಗೆಗೆ ತಾಕಿದೆ. ಬ್ಯಾಲಿಸ್ಟಿಕ್ಸ್ ವರದಿಗಾಗಿ ಕಾಯುತ್ತಿದ್ದು ಏಫ್ ಐಆರ್ ದಾಖಲಿಸಲಾಗಿದೆ ಎಂದರು.
ದೇಹದ ಮೂಲಕ ಬುಲೆಟ್ ಹಾದು ಹೋಗಿ ಇನ್ನೊಬ್ಬ ವ್ಯಕ್ತಿಗೆ ಬಡಿಯುವುದು ಅಪರೂಪದ ಘಟನೆ, ಆದರೆ ಅಸಮಾನ್ಯವೇನಲ್ಲ. ವ್ಯಕ್ತಿಗಳು ಪರಸ್ಪರ ಹತ್ತಿರದಲ್ಲಿದ್ದರೆ ಇಂತಹ ಅಚಾತುರ್ಯಗಳಾಗುವ ಸಾಧ್ಯತೆಯಿದೆ. ಕೆಲವು ತಿಂಗಳುಗಳಿಂದ ನಿರುದ್ಯೋಗಿಯಾಗಿರುವ ಈ ವ್ಯಕ್ತಿಯ ಸ್ಥಿತಿ ಗಂಭೀರ ವಾಗಿದ್ದು, ಪತ್ನಿ ಸುರಕ್ಷಿತವಾಗಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ದಂಪತಿಗಳು ಫರಿದಾಬಾದ್ ಮೂಲದವರಾಗಿದ್ದು, ಏಳು ತಿಂಗಳ ಗರ್ಭಿಣಿಯಾಗಿದ್ದ ಹೆಂಡತಿಯನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ.ಇವರು 2019 ರಲ್ಲಿ ವಿವಾಹವಾಗಿದ್ದರು. ಘಟನೆ ನಡೆದ ನಂತರ ದಾರಿಹೋಕರೊಬ್ಬರು ಕಾರಿನೊಳಗೆ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಮಹಿಳೆಯ ಹೇಳಿಕೆಯನ್ನು ಆಧರಿಸಿ ಏಫ್ ಐಆರ್ ದಾಖಲಿಸಿದ್ದು, ಆ ವ್ಯಕ್ತಿಗೆ ಬಂದೂಕಿಗೆ ಪರವಾನಗಿ ಇದೆಯೇ ಎಂದು ಪರಿಶೀಲಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಶ್ಮೀರದಲ್ಲಿ ಈ ವರ್ಷ 26 ವಿದೇಶಿ ಭಯೋತ್ಪಾದಕರ ಸಂಹಾರ
ಶ್ರೀನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು
ವಿಡಿಯೋ ವೈರಲ್: ಪತ್ನಿಯ ಥಳಿತಕ್ಕೆ ಕಂಗಾಲಾದ ಪ್ರಿನ್ಸಿಪಾಲ್, ಭದ್ರತೆ ಕೊಡಿ ಎಂದ ಕೋರ್ಟ್!
8 ವರ್ಷಗಳನ್ನು ಹಿಂದಿನ 3 ದಶಕಗಳೊಂದಿಗೆ ಹೋಲಿಕೆ ಮಾಡಿ: ಪ್ರಧಾನಿ ಮೋದಿ
ಭಾರತದಲ್ಲಿ 24ಗಂಟೆಯಲ್ಲಿ 2,628 ಕೋವಿಡ್ ಪ್ರಕರಣ ದೃಢ, 18 ಮಂದಿ ಸಾವು